ಹರಿಹರ ನಗರಸಭೆ ಪೂರ್ವಭಾವಿಸಭೆ ಜ.16 ಕ್ಕೆ ಮುಂದೂಡಿದೆ

ಹರಿಹರ.ಜ.೮; ನಗರಸಭೆಯಿಂದ ನಗರದ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ 2021–2022  ನೇ ಸಾಲಿನ ಆಯವ್ಯಯ ತಯಾರಿಸಲು ಪೂರ್ವಭಾವಿ ಸಭೆಯನ್ನು ಜ.8ರಂದು ನಗರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದು ಕಾರಣಾಂತರಗಳಿಂದ ಪೂರ್ವಭಾವಿ ಸಭೆಯನ್ನು ಮುಂದೂಡಿ ಜ16ರಂದು ಬೆಳಿಗ್ಗೆ 11 ಕ್ಕೆ ನಗರಸಭಾ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿದ್ದು ಸದರಿ ಸಭೆಗೆ ನಗರದ ನಾಗರಿಕರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಲು ನಗರಸಭೆ ಪೌರಾಯುಕ್ತರಾದ ಉದಯ ಕುಮಾರ್ ಬಿ ತಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.