ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀರಾಮನವಮಿ

ಹರಿಹರ : ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ವಿಜೃಂಭಣೆಯಿಂದ ಆಚರಣೆಗೊಂಡ ಶ್ರೀರಾಮನವಮಿ ಸಂಭ್ರಮದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹನಗವಾಡಿ ಅವರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.ಹೊಳೆಸಿರಿಗೆರೆಯ ಭೋವಿ ಕಾಲೋನಿಯಲ್ಲಿ, ಮಲ್ಲನಾಯಕನಹಳ್ಳಿಯ ನೆಹರು ನಗರದಲ್ಲಿ, ಕುಂಬಳೂರು ಗ್ರಾಮದ ವಿನಾಯಕ ನಗರ, ಸಾಲಕಟ್ಟೆ ಗ್ರಾಮದ ರೆಡ್ಡಿ ಕ್ಯಾಂಪ್, ಸತ್ಯನಾರಾಯಣ ಕ್ಯಾಂಪ್ ನಲ್ಲಿ ಜರುಗಿದ ಶ್ರೀರಾಮನವಮಿ ಆಚರಣೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಪ್ರಮುಖರೊಡನೆ ಪಾಲ್ಗೊಂಡಿದ್ದರು.