ಹರಿಹರ ತಾಲೂಕಿನ 23 ಗ್ರಾ.ಪಂಗಳಿಗೆ ಚುನಾವಣೆ

ಮಲೇಬೆನ್ನೂರು.ಡಿ.೨೨; ಹರಿಹರ ತಾಲ್ಲೂಕಿನ 23 ಗ್ರಾ.ಪಂಚಾಯತ್ ಗಳಿಗೆ ಚುನಾವಣೆ ನಡೆದಿದೆ.  169 ಸಾಮಾನ್ಯ , 182 ಮಹಿಳೆ ಒಟ್ಟು 351 ಸ್ಥಾನಗಳ ಪೈಕಿ 55 ಅವಿರೋಧ ಆಯ್ಕೆಯಾಗಿದ್ದಾರೆ ಹರಿಹರ ತಾಲ್ಲೂಕಿನ ಎಳೆಹೂಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಳಹಳ್ಳಿ ಯಲ್ಲಿ ಚುನಾವಣೆ ಬಹಿಷ್ಕಾರ ಮಾಡಿದರಿಂದ ಅಲ್ಲಿ ಚುನಾವಣೆ  ನಾಮಪತ್ರ ಸಲ್ಲಿಕೆಯಾಗಿಲ್ಲ  ಒಟ್ಟು 295 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ . ಹಳ್ಳಿಗಳಲ್ಲಿ ಚುನಾವಣಾ ಕಣ ರಂಗೆರಿದೆ ತಮ್ಮ ಗುಂಪುಗಳನ್ನು ಮಾಡಿಕೊಂಡು ಅಭ್ಯರ್ಥಿಗಳು ಮನೆಮನೆಗೆ ಮತಬೇಟೆಗೆ ತೆರಳುತ್ತಾ ಮತದಾರರ ಮನವೊಲಿಸುತ್ತಿದ್ದಾರೆ ಹರಿಹರ ತಾಲ್ಲೂಕು ಕಾಂಗ್ರೆಸ್. ಬಿಜೆಪಿ. ಜೆಡಿಎಸ್.ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಗೆ ಉಳಿದಿದ್ದಾರೆ ಸಮೀಪ ದ ಕೊಮಾರನಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಪಟೇಲ್. ರಂಗಪ್ಪನವರು  ನೇತೃತ್ವದಲ್ಲಿ ಮತದಾರರ ಮನೆಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದರು