ಸಂಜೆವಾಣಿ ವಾರ್ತೆ
ಹರಿಹರ ಜು 29 ; ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಪೌರಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಕಚೇರಿಯಲ್ಲಿ ಭೇಟಿ ಮಾಡಿ ಹರಿಹರ ತಾಲೂಕಿನ ಅಭಿವೃದ್ಧಿ ಕುಂಟಿತಗೊಂಡಿದ್ದು ಕೂಡಲೇ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಹರಿಹರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎನ್ ಎಚ್ ಶ್ರೀನಿವಾಸ್ ನಂದಿಗಾವಿ ಸಚಿವರಲ್ಲಿ ಮನವಿ ಮಾಡಿ ಮಾತನಾಡಿದರು ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಅಮೃತ ಯೋಜನೆ ಅನುಷ್ಠಾನ ಮತ್ತು ಮಲೇಬೆನ್ನುರು ಪುರಸಭೆಯ ಕಚೇರಿಗೆ ಬೇಕಾದ ಎರಡು ಎಕರೆ ಭೂಮಿ ನೀರಾವರಿ ಇಲಾಖೆಯಿಂದ ಹಸ್ತಾಂತರ ಹಾಗೂ ಮಲೇಬೆನ್ನೂರಿನ ಸಮಸ್ಯೆ ಕುಡಿಯುವ ನೀರನ್ನು ಶೇಖರಣೆ ಮಾಡಲು ಒವರ್ ಟ್ಯಾಂಕ್ ನಿರ್ಮಿಸಲು ಜಾಗ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು ಸಮಸ್ಯೆಗಳನ್ನು ಆಲಿಸಿದ ಕೂಡಲೇ ಸಚಿವ ರಹಿಂಖಾನ್ , ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತ್ವರಿತವಾಗಿ ಇಲಾಖೆಗೆ ಹಸ್ತಾಂತರ ಮಾಡಲು ಸೂಚನೆ ನೀಡಿದರು ಹಾಗೂ ಹರಿಹರ ಹರಿಹರ ನಗರಸಭೆ ನಗರೊತ್ಥಾನ ಯೋಜನೆ ಯಲ್ಲಿ ತಡೆಹಿಡಿಯಲಾಗಿದ್ದ 8 ಕೋಟಿ ಅನುದಾನ ಬಿಡುಗಡೆಗೆ ದೂರವಾಣಿ ಮೊಲಕ ಅಧಿಕಾರಿಗಳಿಗೆ ಸೂಚಿಸಿದ್ದರು.
.