ಹರಿಹರ; ಜೂಜಾಟಕ್ಕೆ ಕಡಿವಾಣ

ಹರಿಹರ.ಏ.19;  ನಗರ ಠಾಣೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಟ್ಕಾ ಇಸ್ಪೀಟ್ ಜೂಜಾಟ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಕೆಲವಡೆ ದಾಳಿ ನಡೆಸಿರುವ ಪ್ರಕರಣ ದಾಖಲಾಗಿದೆ ಎಂದು ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ಹೇಳಿದರುಖಚಿತ ಮಾಹಿತಿ ಮೇರೆಗೆ ನಗರದ ಜೋಡು ಬಸವೇಶ್ವರ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದವರನ್ನು ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು 
ಮಟ್ಕಾ ಇಸ್ಪೀಟ್ ಇನ್ನಿತರೆ ಜೂಜಾಟದಲ್ಲಿ ಆಟೊರಿಕ್ಷಾ ಓಡಿಸುವವರು ಕೂಲಿ ನಾಲಿ ಮಾಡಿ ಜೀವನ ಸಾಗಿಸುವಂಥ ಯುವಕರೇ  ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ .ಜಿಲ್ಲಾ ವರಿಷ್ಠಾಧಿಕಾರಿ ಹನಮಂತರಾಯ, .  ಗ್ರಾಮಾಂತರ ವಿಭಾಗದ ಡಿವೈಎಸ್ ಪಿ ನರಸಿಂಹ ವಿ ತಾಮ್ರಧ್ವಜ. ಹರಿಹರದ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಯು .ಇವರುಗಳ ಮಾರ್ಗದರ್ಶನದಲ್ಲಿ  ಕಾರ್ಯಾಚರಣೆಯನ್ನು ಮಾಡಲಾಗುತ್ತದೆ ಎಂದರು .ಅಪರಾಧ ವಿಭಾಗದ ಪಿಎಸ್ಸೈ ಲತಾ ತಾಳೇಕರ್ .ದ್ವಾರಕೀಶ್. ಸತೀಶ್ ಟಿ ವಿ. ನಾಗರಾಜ್ ಸುಣಗಾರ 
ಶಿವರಾಜ್ .ಲಿಂಗರಾಜ್ .ದೇವರಾಜ್. ಪೊಲೀಸರ ತಂಡ ಮಟ್ಕಾ ಇಸ್ಪೀಟ್ ಜೂಜಾಟ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಾಗಿದ್ದಾರೆ