ಹರಿಹರ ಕ್ಷೇತ್ರಕ್ಕೆ  ಅತಿ ಹೆಚ್ಚು ಅನುದಾನ ನೀಡಿದ್ದೇನೆ : ಸಂಸದ‌ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ.ಮಾ.14; ಹರಿಹರ ಕ್ಷೇತ್ರದ ಮೇಲೆ ವಿಶೇಷ ಕಾಳಜಿಯಿರುವುದರಿಂದಲೇ  ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನ ತಂದಿದ್ದೇನೆ. 2019 ರಿಂದ ಹರಿಹರಕ್ಕೆ ಸುಮಾರು 200 ಕೋಟಿಗೂ ಹೆಚ್ಚು ಅನುದಾನವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿಂದ ಮಂಜೂರು ಮಾಡಿಸಿದ್ದೇನೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.ಸಂಕ್ಲೀಪುರ ಗ್ರಾಮದಲ್ಲಿ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆಗಳ ಅಭಿವೃದ್ದಿಗಾಗಿ ಸುಮಾರು 75 ಕೋಟಿಗೂ ಹೆಚ್ಚು ಅನುದಾನ ತಂದು ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಸ್ವಾತಂತ್ರಪೂರ್ವದಿAದಲೂ ಸಮಸ್ಯೆಯಾಗಿದ್ದ ಸಂಕ್ಲೀಪುರ-ಮುಕ್ತೇನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕಾಗಿ ರೂ.7.00 ಕೋಟಿ ಅನುದಾನ ನೀಡಿದ್ದೇನೆ ಎಂದರು.ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಕೆಲವರು ಕೇವಲ ಮಾತುಗಳನ್ನೇ ಸಾಧನೆ ಎಂದು ತಿಳಿದುಕೊಂಡಿದ್ದಾರೆ, ಆದರೆ, ನಮ್ಮ ಕೆಲಸಗಳು ಸಾಧನೆಗಳಾಬೇಕೇ ವಿನ: ಮಾತೇ ಸಾಧನೆಯಾಗಬಾರದು. ನನಗೆ ಕೆಲಸ ಮಾಡುವ ಇಚ್ಚಾಶಕ್ತಿ ಇದೆ, ಬದ್ದತೆ ಇದೆ, ಈ ಕಾರಣದಿಂದಾಗಿಯೇ ಹರಿಹರಕ್ಕೆ ಸುಮಾರು 20 ಕೋಟಿ ವೆಚ್ಚದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಂಜೂರು ಮಾಡಿಸಿ ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿದ್ದೇನೆ, ಕಳೆದ ನಾಲ್ಕೆöÊದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾರಥಿ-ಚಿಕ್ಕಬಿದರೆ ರಸ್ತೆ ಹಾಗೂ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಈ ಎಲ್ಲವೂ ಅಭಿವೃದ್ದಿ ಕಾರ್ಯಗಳಲ್ಲವೇ ಎಂದರು. ಕೇವಲ ವಿರೋಧ ಪಕ್ಷದಲ್ಲಿದ್ದೇವೆ ಎನ್ನುವ ಕಾರಣಕ್ಕೆ ಎಲ್ಲವನ್ನೂ ವಿರೋಧ ಮಾಡುವ ಕೆಲಸ ಒಳ್ಳೆಯದಲ್ಲ ಸಾರ್ವಜನಿಕರಿಗೆ ಒಳ್ಳೆಯದಾಗುವ ಕೆಲಸಗಳನ್ನು ಯಾರೇ ಮಾಡಲಿ ಅದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವ ಗುಣವನ್ನು ಪ್ರತಿಯೊಬ್ಬ ಜನಪ್ರತಿನಿಧಿಗಳು ಬೆಳೆಸಿಕೊಳ್ಳಬೇಕು, ಹೀಗಾದಾಗ ಮಾತ್ರ ರಾಜಕಾರಣದಲ್ಲಿ ವಾತಾವರಣ ಆರೋಗ್ಯಕರವಾಗಿರಲು ಸಾಧ್ಯ ಎಂದರು. ನಮ್ಮ ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದೇ ಇರುವ ಕ್ಷೇತ್ರಗಳ ಬಗ್ಗೆ ನಾನು ಹೆಚ್ಚಿನ ಗಮನ ಹರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನೇಕ ಸಚಿವರನ್ನು ಭೇಟಿಯಾಗಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದರು. ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಶೇರಾಪುರ, ಕೆ.ಬೇವಿನಹಳ್ಳಿ, ಸಂಕ್ಲೀಪುರ, ಕೊಪ್ಪ, ಕೊಮಾರನಹಳ್ಳಿ, ಜಿಗಳಿ, ಕೊಕ್ಕನೂರು, ನಂದೀಶ್ವರ ಕ್ಯಾಂಪ್‌ಗಳಲ್ಲಿ ಸುಮಾರು 20 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಪಿ.ಹರೀಶ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಎಸ್.ಎಂ.ವೀರೇಶ್ ಹನಗವಾಡಿ, ಬಿ.ಜೆ.ಪಿ. ಮುಖಂಡರಾದ ಚಂದ್ರಶೇಖರ್ ಪೂಜಾರ್, ತಾಲ್ಲೂಕು ಬಿ.ಜೆ.ಪಿ. ಪ್ರಧಾನಕಾರ್ಯದರ್ಶಿಗಳಾದ ಕಡರಾನಾಯಕಹಳ್ಳಿ ಮಹಾಂತೇಶ್, ಆದಾಪುರ ವೀರೇಶ್, ಹರಿಹರ ನಗರದ ಕೌನ್ಸಿಲರ್ ಅಮರಾವತಿ ಎ.ಬಿ.ಎಮ್. ವಿಜಯ್, ಶ್ರೀಮತಿ ಅಶ್ವಿನಿ ಕೃಷ್ಣ, ದೂಡಾ ಸದಸ್ಯ ಬಾತಿ ಚಂದ್ರಶೇಖರ್, ಮಲೇಬೆನ್ನೂರು ಕೌನ್ಸಿಲರ್ ಬೆಣ್ಣೆಹಳ್ಳಿ ಸಿದ್ದೇಶ್, ರಾಜು ಪೂಜಾರ್, ಐರಣಿ ಅಣ್ಣೇಶ್, ಜಿಗಳಿ ಹನುಮನಗೌಡ, ಜಿಗಳಿ ಇಂದೂಧರ್, ಕೊಕ್ಕನೂರು ಬೇಕರಿ ಆಶೋಕ್, ಮುಖಂಡರಾದ ರೂಪಾ ಕಾಟ್ವೆ ಇದ್ದರು.