ಹರಿಹರ; ಉತ್ಸಾಹದಿಂದ  ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು

ಹರಿಹರ.ಮಾ.31: ವಿದ್ಯಾರ್ಥಿಗಳು ಯಾವುದೇ ಭಯ, ಆತಂಕಕ್ಕೆ ಒಳಗಾಗದೆ ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಹನುಮಂತಪ್ಪ ಹೇಳಿದರು ರಾಜ್ಯದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ನಗರದ ಎಂ ಕೆ ಇ ಟಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ  ಪತ್ರಿಕೆಯನ್ನು ವಿತರಿಸಿ ಮಾತನಾಡಿದರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನದಂತೆ ಮಾ 31 ರಿಂದ ಏ 15 ವರೆಗೂ 10ನೇ ತರಗತಿ ಪರೀಕ್ಷೆ ನಡೆಯುತ್ತದೆ. ನಗರದಲ್ಲಿ ಡಿ ಆರ್ ಎಂ ಸರ್ಕಾರಿ ಪದವಿ ಪೂರ್ವ ಕಾಲೇಜು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗಾಂಧಿ ಮೈದಾನ. ಹಾಲಪ್ಪ ಶಾಮನೂರ್ ಶಿವಪ್ಪ ಪ್ರೌಢಶಾಲೆ.ಎಂಆರ್‌ಬಿ ಪ್ರೌಢಶಾಲೆ. ಎಂ ಕೆ ಇ ಟಿ ಪ್ರೌಢಶಾಲೆ. ಗ್ರಾಮೀಣ ಪ್ರದೇಶವಾದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮಲೆಬೆನ್ನೂರು. ಸರ್ಕಾರಿ ಪೂರ್ವ ಕಾಲೇಜು ಕುಂಬಳೂರು. ಮಾಗೋಡ ಹಾಲಪ್ಪ ಪ್ರೌಢಶಾಲೆ ಹೊಳೆ ಸಿರಿಗೇರಿ. ಶ್ರೀ ನಂದೇಶ್ವರ ಗ್ರಾಮಾಂತರ ಪ್ರೌಢಶಾಲೆ ನಂದಿಗುಡಿ. ಕರ್ನಾಟಕ ಪಬ್ಲಿಕ್ ಸ್ಕೂಲ್ ಬಾನಹಳ್ಳಿ. ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಬೆಳ್ಳೂಡಿ. ಸರ್ಕಾರಿ ಪ್ರೌಢಶಾಲೆ ಸಾರಥಿ.  ಸೇರಿದಂತೆ  13 ಪರೀಕ್ಷೆ ಕೇಂದ್ರಗಳಲ್ಲಿ  ಗಂಡು 1586– ಹೆಣ್ಣು 1540ಒಟ್ಟು 3126 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದರು165 ವ್ಯವಸ್ಥಿತವಾದ ಕೊಠಡಿ ಕೇಂದ್ರಗಳು ಪೀಠೋಪಕರಣಗಳು ಕುಡಿಯುವ ನೀರಿನ ವ್ಯವಸ್ಥೆ200 ಅಡಿ  ಕೇಂದ್ರದ ಸುತ್ತಲು  ಸಾರ್ವಜನಿಕರು  ಪ್ರವೇಶವನ್ನು  ನಿರ್ಬಂಧಿಸಿ ಪರೀಕ್ಷೆಗಳು ಸುಗಮವಾಗಿ ನಡೆಯುವುದಕ್ಕೆ ಪ್ರತಿ ಪರೀಕ್ಷೆ  ಕೇಂದ್ರಕ್ಕೆ ಪೊಲೀಸ್ ಆರೋಗ್ಯ ಸಹಾಯಕರು ಮೊಬೈಲ್ ಸ್ವಾದಿನ ಅಧಿಕಾರಿಗಳು ಶಿಕ್ಷಕರು ಸೇರಿದಂತೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು ಪರೀಕ್ಷೆ ನಡೆಯುವ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಸುತ್ತಲಿನ ಪ್ರದೇಶದಲ್ಲಿ ಈಗಾಗಲೇ ನಿಷೇಧಾಜ್ಞೆಯನ್ನ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿದ ಪ್ರದೇಶದಲ್ಲಿ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ತೆರೆಯುವಂತಿಲ್ಲ ಎಂದು ಸೂಚನೆಯನ್ನು ನೀಡಲಾಗಿದೆ  ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು  ಆತ್ಮಸ್ಥೈರ್ಯದಿಂದ ಎದುರಿಸಬೇಕೆಂದರುಎಂ ಕೆ ಟಿ ಶಾಲೆಯ ಮುಖ್ಯ ಉಪಾಧ್ಯಾಯರು ಶಿಕ್ಷಕರು ಶಿಕ್ಷಕಿರು ಮೇಲ್ವಿಚಾರಕರು ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿಯ ಹಾಗೂ   ಶಾಲೆಯ ಸಿಬ್ಬಂದಿ  ವರ್ಗದವರು ಇದ್ದರು