ಹರಿಹರ: ಇಂದಿರಾನಗರದಲ್ಲಿ ಪರಿಸರ ದಿನಾಚರಣೆ

ಹರಿಹರ.ಜೂ.೯:  ಇಂದಿರಾನಗರದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿಯನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸುರೇಶ್, ಲಿಂಗರಾಜು, ಸಿದ್ದಪ್ಪ ಬೇಡರ್, ಕೃಷ್ಣಸಾ ಕಠಾರೆ, ರಾಜಣ್ಣ, ಜಿ.ಕೆ.ಪಂಚಾಕ್ಷರಿ, ಹೆಚ್.ಎಂ.ಗುರುಬಸವರಾಜಯ್ಯ, ಕೃಷ್ಣ ರಾಜೋಳಿ, ತಿಮ್ಮಣ್ಣ, ಗಣೇಶ.  ಹನುಮಂತಪ್ಪ ಬೇಡರ್, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಗ್ರಾಮದೇವತೆ ದೇವಸ್ಥಾನದ ಅರ್ಚಕರು ಭಾಗವಹಿಸಿದ್ದರು. ಅಶೋಕ ಹಾಗೂ ಬಿಲ್ವಪತ್ರಿಯ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.