ಹರಿಹರ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆ;ರೋಗಿಗಳ ಪರದಾಟ


ಹರಿಹರ.ನ.೨೧; ಇಲ್ಲಿನ ದಾಮೊದಾರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ರೋಗಿಗಳು ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ. ಹರಿಹರ ನಗರದಪ್ರಮುಖ ಆಸ್ಪತ್ರೆಯಾಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನನಿತ್ಯ ನೂರಾರು ರೋಗಿಗಳು ಪರೀಕ್ಷೆಗೆಂದು ಆಸ್ಪತ್ರೆಗೆ ಭೇಟಿ ನೀಡುತ್ತಾರೆ.ಆದರೆ ರೋಗಿಗಳಿಗೆ ಎಕ್ಸರೇ ಸೇರಿದಂತೆ ಇತರೆ ಪರೀಕ್ಷೆಗಳನ್ನು ಮಾಡಲು ವಿದ್ಯುತ್ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ.

ಪರ್ಯಾಯವಾಗಿ ಜನರೇಟರ್ ಸಹ ಕಳೆದ ಮೂರು ದಿನಗಳಿಂದ ಕೆಟ್ಟು ಹೋಗಿರುವುದರಿಂದ ರೋಗಿಗಳು ಇಂದು ಬೆಳಗ್ಗೆಯಿಂದಲೂ ಪರದಾಡುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ವೈದ್ಯಾಧಿಕಾರಿಗಳನ್ನು ಕೇಳಿದರೆ ವಿದ್ಯುತ್ ಇಲ್ಲ ಎಂಬ ಸಿದ್ದ ಉತ್ತರ ನೀಡಿ ರೋಗಿಗಳನ್ನು ಕಳಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯನ್ನು ನಂಬಿರುವ ಬಡಜನರ ತುರ್ತು ಆರೈಕೆಗಾಗಿ ಜನರು ಖಾಸಗಿ ಆಸ್ಪತ್ರೆಯನ್ನು ಅಥವಾ ದಾವಣಗೆರೆಯನ್ನು ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಇಲ್ಲಿನ ಆಡಳಿತಾಧಿಕಾರಿ ಹನುಮನಾಯಕ ಅವರನ್ನು ಪ್ರಶ್ನಿಸಿದರೆ ಅವರು ಬೇಕಾಬಿಟ್ಟಿ ಉತ್ತರಿಸುತ್ತಿದ್ದಾರೆಂದು ರೋಗಿಗಳ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದರು.