ಹರಿಹರ; ಆಂಬ್ಯೂಲೆನ್ಸ್ ವ್ಯವಸ್ಥೆಗೆ ಶಾಸಕ ಎಸ್ ರಾಮಪ್ಪ ಚಾಲನೆ

ಹರಿಹರ.ಮೇ.18 ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ 2ಅಂಬುಲೆನ್ಸ್ ಗಳಿಗೆ ಶಾಸಕ ಎಸ್ ರಾಮಪ್ಪ ಚಾಲನೆ ನೀಡಿದರು ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಅಂಬುಲೆನ್ಸ್ ನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು 
ದಿನದಿನಕ್ಕೆ  ವೈರಸ್ ಅಟ್ಟಹಾಸ ಮೆರೆಯುತ್ತಿದೆ ತುರ್ತು ಸಂದರ್ಭದಲ್ಲಿ ರೋಗಿಗಳು ಜೀವ ಉಳಿಸುವುದಕ್ಕಾಗಿ ಆಕ್ಸಿಜನ್ ಹೊಂದಿರುವಂತಹ 2ಮಿನಿ ಅಂಬುಲೆನ್ಸ ಗಳನ್ನು ವ್ಯವಸ್ಥೆ ಮಾಡಲಾಗಿದೆ. 
ಸಾರ್ವಜನಿಕ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅತಿ ಜರೂರಾಗಿ ಮೂಲಭೂತ ಸೌಲಭ್ಯಗಳನ್ನು ಹಾಗೂ ಸಿಬ್ಬಂದಿಗಳನ್ನು ಕೂಡಲೇ ಒದಗಿಸಬೇಕೆಂದು  ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ ಎಂದರು ಎರಡನೇ ಹಂತದ ಅಲೆ ತ್ರೀವವಾಗಿ ಹರಡುತ್ತಿದ್ದು ಎಲ್ಲಾ ಹಳ್ಳಿಗಳಿಗೂ ಹರಡಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಸಾವಿನ ಸಂಖ್ಯೆಯಲ್ಲೂ ಸಹ ಗಣನೀಯವಾಗಿ ಹೆಚ್ಚಳವಾಗುತ್ತದೆ .ಸಾರ್ವಜನಿಕ ಆಸ್ಪತ್ರೆ ನೂರು ಬೆಡ್ ಗಳಿಗೆ ಹೆಚ್ಚಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಗೊಂಡಿದ್ದರೂ ಸಹ ಅನುಷ್ಠಾನ ಗೊಂಡಿರುವುದಿಲ್ಲ ಪ್ರಸ್ತುತ ಕೇವಲ ಐವತ್ತು ಆಕ್ಸಿಜನ್ ಬೆಡ್ ಗಳಿದ್ದು ಪ್ರತಿ ದಿನ ನೂರಕ್ಕಿಂತ ಅಧಿಕ ಸೋಂಕಿನ ಪ್ರಕರಣಗಳು ಬರುತ್ತಿರುವುದರಿಂದ ಬೆಡ್ಗಳ ಕೊರತೆ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಳ ವಾಗುತ್ತಿದೆ ಕೂಡಲೇ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದರು.ನಗರಸಭೆಯ ಉಪಾಧ್ಯಕ್ಷ ಬಾಬುಲಾಲ್. ಸದಸ್ಯರುಗಳಾದ ಶಂಕರ್ ಖಟಾವ್ಕರ್. ನಾಗರತ್ನಮ್ಮ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ಅಬಿದಲಿ. ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ .ಎಚ್ ತಿಪ್ಪೇಶ್ .ತಹಸೀಲ್ದಾರ್ ಕೆ ವಿ ರಾಮಚಂದ್ರಪ್ಪ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಿ  ಚಂದ್ರಮೋಹನ್. ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮನಾಯ್ಕ್ .ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜಿ ಡಿ ಗಂಗಾಧರ್ .ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವರ್ಗ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಇದ್ದರು