ಹರಿಹರೇಶ್ವರ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

ಹರಿಹರ.ಏ.17; ಕೇಂದ್ರ  ಸರ್ಕಾರದ  ಪುರತತ್ವ ಇಲಾಖೆಯಿಂದ ಇತ್ತಿಚಿನ ದಿನಗಳಲ್ಲಿ ಕೋವಿಡ್ -19 ರೋಗವು ಹೆಚ್ಚಾಗುತ್ತಿರುವ ಕಾರಣ ಮೇ 15  ರವರಿಗೆ ಪುರತತ್ವ ಇಲಾಖೆಗೆ ಸಂಬಂಧ ಪಡುವ ಎಲ್ಲಾ ಐತಿಹಾಸಿಕ ಪ್ರಾಚೀನ  ದೇವಾಲಯಗಳಿಗೆ ಸಾರ್ವಜನಿಕರಿಗೆ  ಪ್ರವೇಶ ನಿರ್ಬಂಧಿಸಲಾಗಿದೆ.ಪುರಾತತ್ವ ಇಲಾಖೆಯ ಆದೇಶದಂತೆ ದೇವಸ್ಥಾನಕ್ಕೆ ಭಕ್ತರು ಬರದಂತೆ ಬೀಗಮುದ್ರೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಯಾವುದೇ ಆದೇಶ ಪತ್ರ ಬಂದಿರುವುದಿಲ್ಲ ಎಂದು ಹರಿಹರೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿ ರಾಜಸ್ವ ನಿರೀಕ್ಷಕ  ಎಲ್ ಆರ್ ಆನಂದ್ ತಿಳಿಸಿದರು