ಹರಿಹರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ

 

ಹರಿಹರ.ನ.30;  ಕೋವಿಡ್ 19 ಸೋಂಕು ಹರಡದಂತೆ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರತಿ ವಾರ್ಡ್ ಮನೆಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಪ್ರತಿಯೊಬ್ಬ ನಾಗರಿಕರೂ ಲಸಿಕೆ ಹಾಕಿಸಿಕೊಂಡು ಸದೃಢ ಆರೋಗ್ಯ ಹೊಂದಬೇಕು  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು ನಗರದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಮೂಲಭೂತ ಸೌಕರ್ಯಗಳು ಬೇಕು ಆದರೆ ಆರೋಗ್ಯ ಕಾಪಾಡುವಂಥ ಲಸಿಕೆ ಬೇಡ ಎನ್ನುವ ರೀತಿ ವರ್ತನೆ ಮಾಡುವುದು ಸರಿಯಲ್ಲ ಪ್ರತಿಯೊಬ್ಬರೂ  ಸೋಂಕು ನಿಯಂತ್ರಣಕ್ಕೆ ಲಸಿಕೆಯನ್ನು ಹಾಕಿಸಿ ಕೊಳ್ಳಬೇಕೆಂದರುಹದಿನೆಂಟು ವರ್ಷ ಮೇಲ್ಪಟ್ಟವರು ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಮೂರನೇ ಅಲೆ  ತಡಗಟ್ಟುವ ನಿಟ್ಟಿನಲ್ಲಿ ಲಸಿಕೆ  ಅಭಿಯಾನವು  ನಿರಂತರವಾಗಿ ನಡೆಯುತ್ತಿರುತ್ತದೆ ಜಿಲ್ಲಾ ತಾಲ್ಲೂಕು ಆರೋಗ್ಯ ನಗರಸಭೆ ಕಂದಾಯ ಇಲಾಖೆ ಪೋಲಿಸ್ ಮತ್ತು ಇತರೆ ಇಲಾಖೆ ಸೇರಿದಂತೆ ಅಧಿಕಾರಿಗಳು ಆಶಾ ಅಂಗನವಾಡಿ ಇಲಾಖೆಯ ಸಿಬ್ಬಂದಿ ವರ್ಗದವರು ತಮ್ಮ ಮನೆ ಮನೆಗೆ ಬಂದು ಲಸಿಕೆ ಹಾಕಿಸಿ ಕೊಳ್ಳುವುದಕ್ಕೆ ಮನವಿ ಮಾಡಿಕೊಳ್ಳುತ್ತಾರೆ ಆದರೆ ತಾವು ಯಾವುದನ್ನೂ ತಿರಸ್ಕರಿಸದೆ ಪ್ರತಿಯೊಬ್ಬರು ಕೋವಿಡ್ 19 ಸೋಂಕು ತಡೆಗಟ್ಟುವ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಅಧಿಕಾರಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ ನಿರ್ಲಕ್ಷ ವಹಿಸದೆ ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಂಡು ಮಹಾಮಾರಿ ವೈರಸ್  ಮುಕ್ತ ಮಾಡುವುದಕ್ಕೆ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದರು ಬೆಂಕಿನಗರ .ಕಾಳಿದಾಸ ನಗರ  .ಸೇರಿದಂತೆ ನಗರದ ಆರೋಗ್ಯ ಸಮುದಾಯ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ವೇಳೆ ಜಿಲ್ಲಾ ಯೋಜನಾ ನಿರ್ದೇಶಕಿ ಜಿ ನಜ್ಮಾ .ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ .ದಾವಣಗೆರೆ ಜಿಲ್ಲಾ ಕೀಟ ಜನ್ಯ  ಮತ್ತು ನೋಡಲ್ ಅಧಿಕಾರಿ ಡಾ ನಟರಾಜ್.ಆರ್ ಸಿಎಚ್ ಡಾ ಮೀನಾಕ್ಷಿ .  ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಿ ಗಂಗಾಧರ್. ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಡಿ ಚಂದ್ರಮೋಹನ್ .ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮಿ  .ಪ್ರೊಬೆಷನರಿ ಡಿವೈಎಸ್ ಪಿ ಭೂತೆ ಗೌಡರ್ .ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಮಂಜುನಾಥ್ ಹೊರಕೇರಿ .ವೈದ್ಯರುಗಳಾದ ವಿಶ್ವನಾಥ್ ಕುಂದಗೋಳ. ಕಾವ್ಯ .ಗ್ರಾಮ ಲೆಕ್ಕಾಧಿಕಾರಿ ಎಚ್ ಸಜಿ ಹೇಮಂತ್ ಕುಮಾರ್  .ಆರೋಗ್ಯ ನಿರೀಕ್ಷಣಾಧಿಕಾರಿಗಳ ಉಮ್ಲಾನಾಯ್ಕ. ದಾದಾಪೀರ್ . ನಗರಸಭೆ ಆರೋಗ್ಯ   ಪ್ರಾಥಮಿಕ ಕೇಂದ್ರ ಕಂದಾಯ ಇಲಾಖೆ ಪೊಲೀಸ್ ಇಲಾಖೆ ಆಶಾ ಅಂಗನವಾಡಿ ಸಹಾಯಕರು ಹಾಗೂ   ಸಿಬ್ಬಂದಿ ವರ್ಗದವರು ಇದ್ದರು