ಹರಿಹರದ ಪಂಚಮಸಾಲಿ ಪೀಠದಲ್ಲಿ ಜ.೧೪-೧೫ ರಂದು ಹರಜಾತ್ರಾ ಮಹೋತ್ಸವ

ದಾವಣಗೆರೆ.ಜ.೧೧: ಇದೇ ಜನವರಿ ೧೪ ಹಾಗೂ ೧೫ ರಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಹರಜಾತ್ರಾ ಮಹೋತ್ಸವ-೨೦೨೩ , ಬೃಹತ್ ಜನ ಜಾಗೃತಿ ಸಮಾವೇಶ,  ಜ್ಞಾನಯೋಗಿಗೆ ನುಡಿನಮನ ಹಾಗೂ ಶ್ರೀ ವಚನಾನಂದ ಸ್ವಾಮಿಗಳ ಪೀಠಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹರಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. ೧೪ ರ  ಬೆಳಿಗ್ಗೆ ೮ ಗಂಟೆಗೆ ಹರಿಹರ ಬೈಪಾಸ್ ರಸ್ತೆಯಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ವಾದ್ಯಮೇಳದೊಂದಿಗೆ ಸಮಾಜದ ಮಹಿಳೆಯರು ಪೂರ್ಣಕುಂಭ ದೊಂದಿಗೆ ಹಾಗೂ ರೊಟ್ಟಿ ಬುತ್ತಿ ಮೆರವಣಿಗೆಯನ್ನು ನಡೆಸಲಿದ್ದು, ಸಮಾವೇಶ ನಡೆಯುವ ಸ್ಥಳವನ್ನು ತಲುಪಲಿದೆ ಎಂದರು.ನಂತರ ಬೆಳಿಗ್ಗೆ ೧೧ ಗಂಟೆಗೆ ಸಮಸ್ತ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಲ್ಲಿ ಓಬಿಸಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಬೃಹತ್ ಜನ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ಶ್ರೀ ಮಹಾದೇವ ಸ್ವಾಮೀಜಿ, ಶ್ರೀ ನಿರಂಜನಾನಂದಪುರಿ,ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮಿ, ಶ್ರೀ ಮಹಾಂತ ಸ್ವಾಮಿಗಳು ಹಾಗೂ ಶ್ರೀ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದಾರೆ.ಸಂಘದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಅಧ್ಯಕ್ಷತೆ ವಹಿಸಲಿದ್ದು, ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಬಸವರಾಜ್ ದಿಂಡೂರು ಜನಜಾಗೃತಿ ನುಡಿಗಳನ್ನಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಗಣ್ಣ ಕರಡಿ, ಲಕ್ಷ್ಮೀ ಹೆಬ್ಬಾಳ್ಕರ್ ಇನ್ನಿತರರು ಉಪಸ್ಥಿತರಿರುವರು ಎಂದರು.ಮಧ್ಯಾಹ್ನ ೩ಕ್ಕೆ ರೈತರತ್ನ  ಸಮಾವೇಶದ ಶ್ರೀ ಮೇಮನಾನಂದ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದು, ಶ್ರೀ ಪೀಠದ ಪ್ರಧಾನ ಧರ್ಮದರ್ಶಿ  ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಎಸ್. ಯಡ್ಯೂರಪ್ಪ ಸಂಕ್ರಾಂತಿ ಸಂಭ್ರಮ ಉದ್ಘಾಟಿಸಲಿದ್ದು, ರೈತರತ್ನವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹರಜಾತ್ರ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರೈತ ಸಂದೇಶವನ್ನು ಜಯಲಕ್ಷ್ಮಿ ವೀರಗಂಟಿ ರೈತ ಸಂದೇಶ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ್, ಎಸ್.ಎ. ರವೀಂದ್ರನಾಥ್ ಹಾಗೂ ಎಲ್ಲ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಜ.೧೫ ರಂದು ಬೆಳಗ್ಗೆ ೧೧ ಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಲಿಂ.ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ನುಡಿನಮನ ಹಮ್ಮಿಕೊಳ್ಳಲಾಗಿದ್ದು ಈ ವೇಳೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಉದ್ಘಾಟನೆ ಮಾಡಲಿದ್ದಾರೆ.ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ.ನಾಗನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.ನಟ ಡಾಲಿ ಧನಂಜಯ ನುಡಿ ನೈವೇದ್ಯ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಸಿ.ಎಸ್ ಅಶ್ವತ್ ನಾರಾಯಣ,ಪರಿಷತ್ ಸದಸ್ಯ ಕೆ.ಎಸ್ ನವೀನ್ ಹಾಗೂ ನಾಡಿನ ಗಣ್ಯರು ಆಗಮಿಸಲಿದ್ದಾರೆ ಎಂದರು.ಅಂದು ಮಧ್ಯಾಹ್ನ ೩ ಕ್ಕೆ ಶ್ರೀ ವಚನಾನಂದ ಸ್ವಾಮೀಜಿಯವರ ಪಂಚಮ ಪೀಠಾರೋಹಣ ಜರುಗಲಿದ್ದು ದಿವ್ಯ ಸಾನಿಧ್ಯವನ್ನು ಬಾಲ್ಕಿಯ ಶ್ರೀ ಡಾ.ಬಸವಲಿಂಗ ಪಟ್ಟದೇವರು,ಚಿತ್ತರಗಿಯ ಶ್ರೀ ಗುರುಮಹಾಂತ ಮಹಾಶಿವಯೋಗಿಗಳು ವಹಿಸಲಿದ್ದಾರೆ.ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಪೀಠಾರೋಹಣದ ಉದ್ಘಾಟನೆ ನೆರವೇರಿಸಲಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಪಂಚಮವಾಣಿ ಪತ್ರಿಕೆ ಅನಾವರಣ ಮಾಡಲಿದ್ದಾರೆ.ಶ್ರೀಪೀಠದ ಧರ್ಮದರ್ಶಿ ಪಿ.ಡಿ ಶಿರೂರು ಅಧ್ಯಕ್ಷ ವಹಿಸಲಿದ್ದಾರೆ.ಪೀಠಾರೋಹಣ ನುಡಿ ನಮನ ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ‌ಅಹ್ಮದ್ , ಜನಪ್ರತಿನಿಧಿಗಳಾದಗಾಲಿ ಜನಾರ್ಧನರೆಡ್ಡಿ,ಈಶ್ವರ್ ಖಂಡ್ರೆ,ಎಂ.ಬಿ ಪಾಟೀಲ್,ಸತೀಶ್ ಜಾರಕಿಹೊಳೆ,ಎಸ್  ಎಸ್ ಮಲ್ಲಿಕಾರ್ಜುನ, ಪಿ.ಟಿ ಪರಮೇಶ್ವರ ನಾಯ್ಕ್ ಮತ್ತಿತರರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡ ಬಿ.ಸಿ ಉಮಾಪತಿ,ಎಂ.ದೊಡ್ಡಪ್ಪ,ಶಿವಕುಮಾರ್, ಮಂಜುನಾಥ್ ಪುರವಂತರ,ಲಿಂಗರಾಜು,ಎಸ್ ಮಲ್ಲಿನಾಥ್ ಉಪಸ್ಥಿತರಿದ್ದರು.