ಹರಿಹರದಲ್ಲಿ ವಿಶ್ವಕರ್ಮ ಜಯಂತೋತ್ಸವ

ಹರಿಹರ.ಸೆ.೧೭; ವಿಶ್ವಕರ್ಮ ಸಮಾಜ ತನ್ನದೇ ಆದ ಇತಿಹಾಸ ಹೊಂದಿದ್ದು, ರಾಜ್ಯ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ತಹಶೀಲ್ದಾರ್ ಕೆಬಿ ರಾಮಚಂದ್ರಪ್ಪ ಹೇಳಿದರು
ಮಿನಿವಿಧಾನಸೌಧ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜದ ಜನರು ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕöÈತಿ ಬಿಂಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದ್ಭುತ ಕೆತ್ತೆನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ. ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಅದೊಂದು ಸಂಸ್ಕöÈತಿ ಎಂದು ಅಭಿಪ್ರಾಯಪಟ್ಟರು.ಎಲ್ಲಾ ಸಮುದಾಯದ ಜನರನ್ನು ಸಮಾಜದ ಮುಖ್ಯವಾನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶ.ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನರಿಗಾಗಿ ಹಲವು ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತಂದಿದೆ.ವಿಶ್ವಕರ್ಮ ಸಮಾಜ ಭಾರತ ದೇಶದಲ್ಲಿ ವಿಗ್ರಹ ಮತ್ತು ಶಿಲ್ಪಕಲೆಯಿಂದ ಗುರುತಿಸಿಕೊಂಡಿದೆ ಎಂದರು.ಈ ಸಂದರ್ಭದಲ್ಲಿ ಸಮಾಜದವರಾದ ರುದ್ರಚಾರಿ ,ಲಕ್ಷಿ÷್ಮ ರಾಜ್ ,ನಾಗರಾಜ್, ಶಶಿಕಲಾ, ಸುನಿತಾ, ವಿರಾ ಚಾರಿ ,ಪ್ರವೀಣ್ ಆಚಾರಿ, ಹರೀಶ್ ಚಾರಿ, ವಾಸುದೇವ್, ಪರಮೇಶ್ವರ, ಮಾಲ್ತೇಶ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು .