ಹರಿಹರದಲ್ಲಿ ಭೀಮನ ಅಮವಾಸ್ಯೆ ಆಚರಣೆ

ಹರಿಹರ.;  ಭೀಮನ ಅಮಾವಾಸ್ಯೆಯಂದು ಪತ್ನಿ ತನ್ನ ಪತಿಗೆ ಪಾದಪೂಜೆ ಮಾಡಿ ಆಯಸ್ಸು ಆರೋಗ್ಯ ಅಭಿವೃದ್ಧಿ ಹಾಗೂ ದೀರ್ಘಕಾಲ ಸುಮಂಗಲಿಯಾಗಿರುವಂತೆ ಬೇಡಿಕೊಳ್ಳುವ ಹಬ್ಬವೇ ಭೀಮನ ಅಮಾವಾಸೆ ಪೂಜೆ.ಈ  ದೃಶ್ಯ ಶಿವಮೊಗ್ಗ ರಸ್ತೆಯ ಮಂಗಳ ಶೋರೂಮ್ ಹಿಂಭಾಗದ ಪರಸಪ್ಪರ ಬಡಾವಣೆಯ ಅನ್ಯೋನ್ಯ ನಿವಾಸನದಲ್ಲಿ  ಶಿಕ್ಷಕಿ ಕಾವ್ಯ ಜಗದೀಶ ಹಿರೇಮಠ ಇವರು ತಮ್ಮ ಪತಿಯ ಪಾದ ಪೂಜೆ ಮಾಡಿದರು ಈ ವೇಳೆ ಮಾತನಾಡಿದ ಅವರು ಭೀಮನ ಅಮವಾಸ್ಯೆಯು ಬಲವಾದ ಧಾರ್ಮಿಕ ಮೌಲ್ಯಗಳನ್ನು ಹೊಂದಿದೆ ಮತ್ತು ಈ ದಿನವನ್ನು ಪೂರ್ವಜರ ಆರಾಧನೆಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆಷಾಢ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಆಷಾಢ ಅಮವಾಸ್ಯೆ, ಆಟಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಭೀಮನ ಅಮವಾಸ್ಯೆಯು ಶಿವನಿಗೆ ಸಮರ್ಪಿತವಾಗಿದೆ  ಹಿಂದೂ ಸಂಪ್ರದಾಯದಲ್ಲಿ ಆಷಾಢ ಮಾಸದ ಕೊನೆಯ ದಿನವಾದ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆಎಂದು ಆಚರಿಸಲಾಗುತ್ತದೆ. ನಾಗರ ಅಮವಾಸ್ಯೆ ಮತ್ತು ಭೀಮನ ಅಮವಾಸ್ಯೆ ಗಂಡನ ಆಯಸ್ಸು ವೃದ್ದಿಯಾಗಲೆಂದು ಪತ್ನಿಯರು ಆಚರಿಸುವ  ಹಬ್ಬವು ಪೂರ್ವಜರ ಕಾಲದಿಂದಲೂ ನಡೆದುಕೊಂಡ ಪದ್ದತಿಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಶಿವ ಡಾಬಾ  ಜಗದೀಶ್  ಮಕ್ಕಳು ಸಹೋದರರು ನಾಗರಪಂಚಮಿ. ಭೀಮನ ಅಮಾವಾಸ್ಯೆಯ ಶುಭಾಶಯ ಕೋರಿದರು 

Attachments area