ಹರಿಹರದಲ್ಲಿ ಪೋಲಿಸರಿಗೆ ಟ್ರೀಟ್ ಮೆಂಟ್

ಹರಿಹರ.ಮೇ.4;  ಹಗಲಿರುಳು ಕರ್ತವ್ಯ ನಿರ್ವಹಿಸುವ  ಕೊರೋನಾ ವಾರಿಯರ್ಸ್ ಗಳಿಗೆ ನಗರ ಠಾಣೆಯಲ್ಲಿ ಬಿಸಿ ಬಿಸಿ ನೀರಿನ ಶಾಖದ ಅವಿಯನ್ನು ತೆಗೆದುಕೊಳ್ಳಲು  ಅವಕಾಶವನ್ನು ಕಲ್ಪಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಸತೀಶ್ ಕುಮಾರ ಯು  ಹೇಳಿದರು ಹೊಸದಾಗಿ ಗ್ಯಾಸ್ ಒಲೆ ಸಿಲಿಂಡರ್ ಪೈಪುಗಳ ಅಳವಡಿಸಿ  ಅದರ ಮುಖಾಂತರ ಅವಿಯನ್ನು ತೆಗೆದುಕೊಳ್ಳಲು ಹರಿಹರ ಪೋಲಿಸ್ ಇಲಾಖೆ ತನ್ನ ಸಿಬ್ಬಂದಿ ವರ್ಗಕ್ಕೆ ಆಯೋಜನೆ ಮಾಡಿದೆ.ಮಾಹಿತಿ ಪ್ರಕಾರ ಮನುಷ್ಯನಿಗೆ  ಮೂಗು ಬಾಯಿಯ ಮುಖಾಂತರ ಅವಿಯನ್ನು ಸೇರಿಸಿಕೊಂಡರೆ  ಸುಗಮವಾಗಿ ವ್ಯಕ್ತಿಯು ಉಸಿರಾಟ ಮತ್ತು ಗಂಟಲಿನಲ್ಲಿ ಇರುವಂಥ ವೈರಸ್ಸು ನಾಶವಾಗುತ್ತದೆ.ಪೂರ್ವಜರ ಕಾಲದಿಂದಲೂ ಮನೆಯಲ್ಲಿ ಶೀತ ನೆಗಡಿ ತಲೆಭಾರ ಸುಸ್ತು ಇನ್ನಿತರೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಮನೆಯಲ್ಲೇ ಬಿಸಿ ನೀರನ್ನು ಕಾಯಿಸಿ ಅದರಲ್ಲಿ ರಾಗಿ ಹಿಟ್ಟು ಅಮೃತಾಂಜನ ಇತರೆ ಮನೆ ಮದ್ದನ್ನು ಉಪಯೋಗಿಸಿ ಶಾಖಾ ಅವಿಯನ್ನು ತೆಗೆದುಕೊಂಡು ಸಾಂಕ್ರಾಮಿಕ ರೋಗಗಳನ್ನು ದೂರ ಮಾಡುತ್ತಿದ್ದರು .ಇಂದಿನ ಕಾಲದಲ್ಲಿ ಪೂರ್ವಜರು ಮಡಿವಂತಿಕೆಯಿಂದ ನಡೆದುಕೊಂಡು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದರೂ ಆದರೆ ಕಾಲ ಬದಲಾದಂತೆ  ಮನುಷ್ಯರು ದಾರಿ ತಪ್ಪುತ್ತಿದ್ದಾರೆ ವರ್ಷಕ್ಕೆ ಹೊಸ ಹೊಸ ಸಾಂಕ್ರಾಮಿಕ ರೋಗಗಳು ಹರಡಿ ಮನುಷ್ಯನ ಜೀವನ  ಜೀವದ ಜತೆ ಚೆಲ್ಲಾಟ ವಾಡುತ್ತಿದೆ .ಕಾಲ ಬದಲಾಗುತ್ತದೆ ಎಂದು ಹೇಳತ್ತಾರೆ ಕಾಲ ಬದಲಾಗುವುದಿಲ್ಲ ಆದರೆ ಮನುಷ್ಯ ಬದಲಾಗುತ್ತಾ ಹೋಗುತ್ತಾನೆ  .ವೇದ ಸುಳ್ಳಾದರೂ ಗಾದೆ ಸುಳ್ಳಾದೀತೇ ಎಂಬ  ಹಿರಿಯರ ಮಾತು ಸತ್ಯ ಆಗಿರುತ್ತದೆ ಎಂದರು ಅದು ಏನೇ ಇರಲಿ ಕಳೆದ ವರ್ಷದಿಂದ ಡೆಡ್ಲಿ ವೈರಸ್ ಜಗತ್ತನ್ನೇ ಆವರಿಸಿಕೊಂಡು ಮನುಷ್ಯರ ಜೀವಗಳನ್ನು ಬಲಿ ತೆಗೆದುಕೊಂಡು ಮತ್ತೆ ಎರಡನೆ ಹಂತದ ಅಲೆ ಅತಿವೇಗವಾಗಿ ಸುನಾಮಿಯಂತೆ ಅಬ್ಬರಿಸಿ ಸಾಕಷ್ಟು ಸಾವು ನೋವುಗಳು ಆಗುತ್ತಿರುವದನ್ನು ನಾವೆಲ್ಲರೂ ನೋಡುತ್ತಿದ್ದೇವೆ ಆದರೂ ಜನರ ನಿರ್ಲಕ್ಷ ವಹಿಸುತ್ತಿರುವುದು ನೋಡಿದರೆ ನಮ್ಮ ಜನಕ್ಕೆ ಬುದ್ಧಿ ಬರುವ ಲಕ್ಷಣ ಕಾಣುತ್ತಿಲ್ಲ ಎಂದು ಬೇಸರದಿಂದ ನುಡಿದರು ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮನೆಯಲ್ಲೇ ಇರಿ ಮನೆಯಿಂದ ಆಚೆ ಬರುವುದರಿಂದ ವೈರಸ್ ನಿಯಂತ್ರಣಕ್ಕೆ ಬರುವುದಿಲ್ಲ ಆದ್ದರಿಂದ ಸಾರ್ವಜನಿಕರು ಹೆಚ್ಚು ಸಮಯವನ್ನು ಮನೆಯಲ್ಲೇ ಕಳೆಯಿರಿ  ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಮನೆಯಿಂದ ಆಚೆ ಬರಬೇಕು ಆವಶ್ಯಕವಾಗಿ ಬೈಕ್ ಕಾರು ಇತರೆ ವಾಹನಗಳಲ್ಲಿ ಸುಖಾಸುಮ್ಮನೆ ಸಂಚರಿಸಬಾರದು ಸರ್ಕಾರ, ಇಲಾಖೆ ಅಧಿಕಾರಿಗಳು ಮಾತ್ರ ವೈರಸ್ ನಿಯಂತ್ರಣಕ್ಕೆ ಶ್ರಮವಹಿಸಿದರೆ ಸಾಲದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಇರುತ್ತದೆ ಜೀವ ಇದ್ದರೆ ಜೀವನ ಮಾಡಲಿಕ್ಕೆ ಸಾಧ್ಯವಾಗುತ್ತದೆ ಆದ್ದರಿಂದ ಮಹಾಮಾರಿ ವೈರಸ್ ಅನ್ನು ಮುಕ್ತ ಮಾಡುವುದಕ್ಕೆ ಪ್ರತಿಯೊಬ್ಬರು ಕೈಜೋಡಿಸಿ ಮುಕ್ತ ಮಾಡೋಣ ಎಂದರು.ಈ ವೇಳೆತಹಸಿಲ್ದಾರ್ ಕೆ ಬಿ ರಾಮಚಂದ್ರಪ್ಪ ಪಿಎಸ್ಸೈಗಳಾದ ಸುನೀಲ್  ಬಸವರಾಜ ತೇಲಿ .ಲತಾ ತಾಳೇಕರ್ .ಪೋಲಿಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.