ಹರಿಹರದಲ್ಲಿ ಅಂಗಡಿಗೆ ಬೆಂಕಿ; ೫೦ ಲಕ್ಷಕ್ಕೂ ಅಧಿಕ ನಷ್ಟ


ಹರಿಹರ.ನ.27;  ನಗರದ  ಪ್ರಭಾಕರ ಪ್ಲೋರಿಂಗ್ ಫರ್ನಿಚರ್  ಪೀಠೋಪಕರಣ ಅಂಗಡಿಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡು  ಧಗಧಗನೆ ಉರಿದು ಸುಮಾರು ಐವತ್ತ ಲಕ್ಷ ರೂ  ನಷ್ಟವಾಗಿರುವ ಘಟನೆ ನಡೆದಿದೆ 
ಶಿವಮೊಗ್ಗ ಆರ್ ರಸ್ತೆಯಲ್ಲಿರುವ ಫರ್ನಿಚರ್ಸ್ ಪೀಠೋಪಕರಣ ಅಂಗಡಿಗೆ ಸುಮಾರು ರಾತ್ರಿ ಹನ್ನೆರಡು ಗಂಟೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಸಿಬ್ಬಂದಿಗಳು ಉರಿಯುತ್ತಿರುವ ಬೆಂಕಿ ನಂದಿಸಲು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಯಿತು ಹನ್ನೆರಡು ಗಂಟೆಗೆ ಹೊತ್ತಿದ  ಬೆಂಕಿ ನಂದಿಸುವಲ್ಲಿ ಬೆಳಗಿನ ಜಾವ ಸರಿಸುಮಾರು 4ಗಂಟೆವರೆಗೂ ನಡೆದಿದೆ. ಹತ್ತು ಅಗ್ನಿ ಶಾಮಕ ವಾಹನಗಳಿಂದ ಬೆಂಕಿ  ನಂದಿಸುವ ಕಾರ್ಯಾ ಚರಣೆ ನಡೆದಿದೆ.ಮಿಠಾಯಿ ಮಂಜುನಾಥ್ ಎಂಬುವರಿಗೆ ಸೇರಿದ್ದ ಪ್ರಭಾಕರ್ ಫ್ಲೋರಿಂಗ್ ಫರ್ನಿಚರ್ ಪೀಠೋಪಕರಣ ಅಂಗಡಿಯ ಅಕ್ಕಪಕ್ಕದಲ್ಲಿ  ಬಂಗಾರದ ಅಂಗಡಿ ಚಪ್ಪಲಿ ವಾಚ್ ಹೋಟಲ್ ಇತರೆ ಅಂಗಡಿಗಳಿಗೆ ಸಾಲುಸಾಲು ಹೊತ್ತಿ ಧಗದಗನೇ ಉರಿದಿದೆ. ಸ್ಥಳಕ್ಕೆ ಪ್ರೊಬೆಷನರಿ ಡಿವೈಎಸ್ಪಿ ಭೂತೆ ಗೌಡರು .ಅಗ್ನಿಶಾಮಕ ದಳದ ಪಿಎಸ್ ಐ ಸುಹಾಸ್ .ಆರ್ ಎಫ್ ಜೈರಾಮಯ್ಯ .ಡಿಎಫ್ ಓ ಬಸವಪ್ರಭು .ಟಿಪಿಇಒ ಸೋಮಶೇಖರಯ್ಯ .ಆರ್ ಸಂಜೀವಮೂರ್ತಿ .ಎಸ್ ಐ ವಿಜಯ್. ಪೊಲೀಸ್ ಅಧಿಕಾರಿಗಳಾದ ದೇವರಾಜ್ .ಸಿದ್ದೇಶ್ ಎಚ್. ರಾಧಾಕೃಷ್ಣ. ಮಲ್ಲಿಕಾರ್ಜುನ .ಪಿಸಿಆರ್ ಹನುಮಂತಪ್ಪ .ಪೋಲಿಸ್ ಇಲಾಖೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಇದ್ದರು 

Attachments area