ಹರಿಹರಕ್ಕೆ ಭೇಟಿ ನೀಡಿದ ದೂಡಾ ಅಧ್ಯಕ್ಷರು

ದಾವಣಗೆರೆ.ಸೆ.೨೫; ದೂಡಾ  ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್   ಹರಿಹರ ನಗರಸಭೆ ವಾರ್ಡ್ 4 ಲೇಬರ್ ಕಾಲೋನಿ ಪಾರ್ಕ್ ಹಾಗೂ ವಿದ್ಯಾನಗರದ ಉದ್ಯಾನವನಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ವೀಕ್ಷಿಸಿದರುಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಗೌರಮ್ಮ ಪಾಟೀಲ್, ಮಾರುತಿರಾವ್ ಘಾಟ್ಗೆ, ಆರ್ ಲಕ್ಷ್ಮಣ, ಭಾತಿ ಚಂದ್ರಶೇಖರ,ಮಾಜಿ ಸದಸ್ಯರಾದ ರಾಜು ರೋಖಡೆ,ನಗರ ಸಭೆ ಸದಸ್ಯರಾದ ಅಶ್ವಿನಿ ಕೃಷ್ಣ,  ಅಟೋ ಹನುಮಂತಪ್ಪ, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ  ಅಭಿಯಂತರರಾದ ಶ್ರೀಕರ್, ಕಿರಿಯ ಅಭಿಯಂತರರಾದ ಅಕ್ಷತ ಕೆ. ಟಿ, ಸೃಜಯ ಉಪಸ್ಥಿತಿರಿದ್ದರು.