ಹರಿಶ್ಚಂದ್ರ ನಗರದಲ್ಲಿ ಲಕ್ಷ್ಮೀ ಅರುಣಾ ಮತಯಾಚನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24:  ಇಲ್ಲಿನ ತಾಳೂರು ರಸ್ತೆಯ ಹರಿಶ್ಚಂದ್ರ ನಗರ ಪ್ರದೇಶದ ಮನೆ ಮನೆಗೆ ತೆರಳಿ  ಇಂದು ಕೆಅರ್ ಪಿ ಪಕ್ಷದ ನಗರ ಅಭ್ಯರ್ಥಿ ಮತಯಾಚನೆ ಮಾಡಿದರು.
ಮನೆ ಮತ ನೀಡಿ ನಿಮ್ಮ ಪ್ರೀತಿಗೆ ನಾನು ಶತಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ, ಹಾಗೂ ಜೀವನದುದ್ದಕ್ಕೂ ಚಿರಋಣಿಯಾಗಿರುತ್ತೇನೆ. ನಿಮ್ಮ ಪ್ರದೇಶದ ಯಾವುದೇ ಸಮಸ್ಯಗೆ ತಕ್ಷಣ ಸ್ಪಂದಿಸುವೆ ಎಂದು ಮಹಿಳೆಯರಲ್ಲಿ ಅದೂ ಮನೆ ಮುಂದೆ ಕುಳಿತಿದ್ದ ವೃದ್ದರಲ್ಲಿ ಕೈ ಮುಗಿದು ಮನವಿ‌ಮಾಡಿ ಮತದಾನದ ಭರವಸೆ ಪಡೆದರು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನಚಾರ್, ಪಕ್ಷದ ಮುಖಂಡರಾದ  ಪ್ರಕಾಶ್ ರೆಡ್ಡಿ, ಗುರುಮೂರ್ತಿ,  ಶಿವಾರೆಡ್ಡಿ, ವಾಸು, ರಾಮು, ವನ್ನೂರ್  ಸ್ವಾಮಿ,  ಮಹಿಳಾ ಘಟಕದ ನಗರ ಅಧ್ಯಕ್ಷೆ ನಾಗವೇಣಿ, ಹರ್ಷಿಯಾ,ಅಂಜಲಿ, ಬಾನು , ಅಕ್ಕಮಹಾದೇವಿ, ಶ್ರೀಮತಿ ರೂಪ, ರಾಜೇಶ್ವರಿ, ಪುಷ್ಪಾವತಿ ಅಲ್ಪಸಂಖ್ಯಾತ ಘಟಕದ ಇಸಾಕ್ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.