ಹರಿವೆ ಸೊಪ್ಪಿನ ಪಲ್ಯ

ಬೇಕಾಗುವ ಸಾಮಗ್ರಿಗಳು

*ಹರಿವೆ ಸೊಪ್ಪು – ೧ ಕಟ್ಟು
*ಆಲೂಗಡ್ಡೆ – ೪
*ಅರಿಶಿಣ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಕೊತ್ತಂಬರಿ ಸೊಪ್ಪು – ೧ ಚಮಚ
*ತೆಂಗಿನ ಕಾಯಿ ತುರಿ- ೧ ಕಪ್
*ಹಸಿರು ಮೆಣಸಿನಕಾಯಿ – ೩
*ಈರುಳ್ಳಿ – ೨
*ಬೆಳುಳ್ಳಿ – ೨
*ಚಕ್ಕೆ – ೫-೬
*ಲವಂಗ – ೫
*ಶುಂಠಿ – ೧
*ಉಪ್ಪು – ೨ ಚಮಚ
*ನೀರು –

ಮಾಡುವ ವಿಧಾನ :
ತೆಂಗಿನ ಕಾಯಿ ತುರಿ, ಹಸಿರು ಮೆಣಸಿನಕಾಯಿ, ಶುಂಠಿ, ಬೆಳುಳ್ಳಿ, ಚಕ್ಕೆ , ಲವಂಗ, ಧನಿಯಾ ಪುಡಿಗೆ ಸ್ವಲ್ಪ ನೀರು ಹಾಕಿ ರುಬ್ಬಿ ಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಈರುಳ್ಳಿ ಆಲೂಗಡ್ಡೆ, ಅರಿಶಿಣ ಹಾಕಿ ಚೆನ್ನಾಗಿ ಬೆರೆಸಿ. ಇದಕ್ಕೆ ಹರಿವೆ ಸೊಪ್ಪು, ಕೊತ್ತಂಬರಿ ಸೊಪ್ಪು, ರುಬ್ಬಿದ ಮಸಾಲ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಈಗ ಹರಿವೆ ಸೊಪ್ಪಿನ ಪಲ್ಯ ಸವಿಯಲು ಸಿದ್ಧ.