ಹರಿಯಾಣ ರಾಜ್ಯಪಾಲರಿಗೆ ಸೋಂಕು

ಚಂಡೀಗಡ , ನ. ೧೭- ಹರ್ಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರಿಗೆ ಕೊರೊನಾ ಸೋಂಕು ತಗುಲಿದ್ದು,
ಸದ್ಯ ಅವರನ್ನು ಪಂಜಾಬ್‌ನ ಮೊಹಾಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರ್ಯ ಅವರಿಗೆ ೮೧ ವರ್ಷ ವಯಸ್ಸಾಗಿದೆ. ರಾಜ್ಯಪಾಲರು ಶೀಘ್ರ ಗುಣಮುಖರಾಗಿ ಎಂದು ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಸಿಎಂ ಖಟ್ಟರ್, ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಸೇರಿದಂತೆ ಅವರ ಸಂಪುಟದ ಹಲವು ಮಂತ್ರಿಗಳು ಸಹ ಸೋಂಕಿಗೆ ತುತ್ತಾಗಿ ನಂತರ ಚೇತರಿಸಿಕೊಂಡಿದ್ದಾರೆ.