ಹರಿದ ಬಣ್ಣ ಮಾಸಿದ ರಾಷ್ಟ್ರ ದ್ವಜ ಹಾರಾಟ. ಅದಿಕಾರಿಗಳ ನಿರ್ಲಕ್ಷ. ಕ್ರಮಕ್ಕೆ ಒತ್ತಾಯ

ಸಿರವಾರ.ಜು೨೬- ರಾಷ್ಟ್ರದ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಅದರಲೂ ಹರಿದ, ಬಣ್ಣ ಮಾಸಿದ, ಮುದುರಿದ ರಾಷ್ಟ್ರದ್ವಜಾರೋಹಣ ಮಾಡುವುದು ಅಪರಾದ ಎಂದು ತಿಳಿದಿದ್ದರೂ ತಾಲೂಕ ಪಂಚಾಯತಿ ಮೇಲೆ ಹರಿದ, ಬಣ್ಣ ಮಾಸಿದ ರಾಷ್ಟ್ರದ್ವಜವನ್ನು ನಿತ್ಯ ಏರಿಸುತ್ತಿದ್ದಾರೆ ತಾ.ಪಂ ಇಓ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳಬೇಕು ಎಂದು ಕರ್ನಾಟಕ ಪ್ರಜಾಶಕ್ತಿ ಸಮಿತಿ ಸಂಘಟನೆ ರಾಜ್ಯ ಉಪಾಧ್ಯಕ್ಷ ಯುವ ಘಟಕ ಮತ್ತು ಜಿಲ್ಲಾಧ್ಯಕ್ಷ ಸೂರಿ ಹುಸೇನಪ್ಪ ನಾಯಕ ಆರೋಪಿಸಿದ್ದಾರೆ. ಪಟ್ಟಣದ ಮುಖ್ಯರಸ್ತೆಯಲ್ಲಿರುವ ತಾಲೂಕ ಪಂಚಾಯತಿ ಮೇಲೆ ನಿತ್ಯ ಹಾರಾಡುವ ರಾಷ್ಟ್ರದ್ವಜವು ಮೇಲ್ಭಾಗದಲ್ಲಿ ಹರಿದಿದೆ, ಕೆಸರಿ ಬಣ್ಣವು ಮಾಸಿದೆ ಇದರೂ ಸಹ ದ್ವಜ ಏರಿಸುವವರ ಗಮನಕ್ಕೆ ಬಂದಿಲವೆ. ತಮ್ಮ ಇಲಾಖೆಯ ಮೇಲೆಯೆ ರಾಷ್ಟ್ರದ್ವಜಾರೋಹಣ ನೋಡದ ತಾಲೂಕ ಪಂಚಾಯತಿ
ಇಓ ಅವರು ಗ್ರಾಮಪಂಚಾಯತಿಗಳ ಮೇಲೆ ಏರಿಸುವ ದ್ವಜಗಳನ್ನು ಎನು ನೋಡುತ್ತಾರೆ. ಕಳೆದ ತಿಂಗಳು ನವಲಕಲ್ ಗ್ರಾಮದ ನೀರಿನ ಟ್ಯಾಂಕ್ ಮೇಲೆ ರಾಷ್ಟ್ರ ದ್ವಜ ಹಾಕಿದರು, ಅದನು ಪತ್ರಕರ್ತರು ತೆಗೆದು ತಮ್ಮಲಿ ಇಟ್ಟುಕೊಂಡಿದ್ದಾರೆ. ತಾಲೂಕಿನಲ್ಲಿ ಶಾಲೆ, ಪಂಚಾಯತಿಗಳಲ್ಲಿ ಈ ರೀತಿ ರಾಷ್ಡ್ರ ದ್ವಜಕ್ಕೆ ಅವಮಾನ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳದೆ ತಮ್ಮ ಅಧಿನ ಅಧಿಕಾರಿಗಳ ರಕ್ಷಣೆಗೆ ಮೇಲಿನ ಅಧಿಕಾರಿಗಳು ನಿಂತಿದ್ದಾರೆ. ಸಿರವಾರ ತಾಲೂಕ ಪಂಚಾಯತಿ ಮೇಲೆ ಹರಿದ,ಬಣ್ಣಮಾಸಿದ ರಾಷ್ಟ್ರ ದ್ವಜವನ್ನು ಹಾರಿಸಿದ ನಿರ್ಲಕ್ಷ ವಹಿಸಿದ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳಬೇಕು ಎಂದು ಒತ್ತಾಯಿಸಿದ್ದಾರೆ.