ಹರಿದು ಹೋದ ಹಾಲ್ ಟಿಕೆಟ್: ವಿದ್ಯಾರ್ಥಿನಿ ಕಂಗಾಲು

ವಿಜಯಪುರ,ಮಾ.9-ದ್ವೀತಿಯ ಪಿಯುಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿನಿಯ ಹಾಲ್ ಟಿಕೇಟ್ ಹರಿದು ಹೋಗಿರುವ ಪ್ರಸಂಗ ಇಂದು ನಡೆದಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನ ಬಳಿ ನಿವಾಸಿ ಪವಿತ್ರಾ ಪುಂಡಲಿಕ ಗುಡ್ಡದ (18) ಎಂಬ ಯುವತಿ ಈ ಬಾರಿ ಗ್ರಾಮದ ಬಿ.ಎಸ್.ಪವಾರ ಪದವಿ ಪೂರ್ವ ಕಾಲೇಜ್‍ನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ದ್ವೀತಿಯ ವರ್ಷದ ಪರೀಕ್ಷೆ ಕಟ್ಟಿದ್ದಳು. ಕಳೆದ ಶುಕ್ರವಾರ ಕಾಲೇಜ್‍ಗೆ ಹೋಗಿ ಹಾಲ್ ಟಿಕೆಟ್ ತಂದಿದ್ದಳು. ಪರೀಕ್ಷೆಗೆ ಸಿದ್ದತೆ ಮಾಡಿ ಕೊಂಡಿದ್ದಳು. ಆದರೆ ಮನೆಯಲ್ಲಿಟ್ಟಿದ್ದ ಹಾಲ್ ಟಿಕೆಟ್ ಹರಿದು ಹೋಗಿ ಅಚ್ಚರಿ ಮೂಡಿಸಿದೆ. ವರ್ಷದ ಹಿಂದೆ ಹೆತ್ತವರನ್ನು ಕಳೆದುಕೊಂಡು ಪವಿತ್ರಾ ಅನಾಥವಾಗಿದ್ದಳು. ಅವಳನ್ನು ಸಂತೈಸಿದ ಸಂಬಂಧಿಕರು ಕಾಲೇಜು ಪ್ರಾಂಶುಪಾಲರಿಗೆ ವಾಸ್ತವ ತಿಳಿಸಿ ಪ್ರವೇಶ ಪತ್ರದ ದ್ವೀತಿಯ ಪತ್ರ ಪಡೆದುಕೊಂಡಿದ್ದರು. ಮತ್ತೆ ಹಾಲ್ ಟಿಕೆಟ್ ಮನೆಯಲ್ಲಿ ಚೂರು ಚೂರು ಆಗಿ ಬಿದ್ದಿತ್ತು. ಇದು ಇನ್ನಷ್ಟು ಆತಂಕ ಮೂಡಿಸಿದೆ. ಇದು ಯಾರದ್ದೂ ಕುತಂತ್ರವೋ ಇಲ್ಲ ಯುವತಿಯ ಸ್ವಂ ಕೃತ್ಯ ಎನ್ನುವ ಯಕ್ಷ ಪ್ರಶ್ನೆ ಕಾಡ ತೊಡಗಿದೆ. ಹೀಗಾಗಿ ಇದರಿಂದ ಮನನೊಂದಿದ್ದೇನೆ ಎಂದು ಪವಿತ್ರಾ ಗುಡ್ಡದ ತಿಳಿಸಿದ್ದಾರೆ.