ಹರಿದು ಹೋದ ಸಂಸ್ಥಾನದ ಏಕತೆಯ ಸರ್ದಾರ ಪಟೇಲ್: ಬಂಡೇರ್

ವಾಡಿ:ನ.1: ದೇಶದ ಸ್ವಾತಂತ್ರ್ಯದ ನಂತರದಲ್ಲಿ ಹರಿದು ಹಂಚಿಹೋಗಿದ್ದ 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದ ಸರ್ದಾರ ವಲ್ಲಭಬಾಯಿ ಪಟೇಲ ರಾಷ್ಟ್ರೀಯ ಏಕತೆಯ ಸೂತ್ರಧಾರ ಎನಿಸಿದ್ದಾರೆ ಎಂದು ವಿವೇಕಾನಂದ ಶಾಲೆಯ ಮುಖ್ಯಗುರು ಚನ್ನಬಸಪ್ಪ ಬಂಡೇರ್ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದಲ್ಲಿ ಗೆಳೆಯರ ಬಳಗ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗೆಳೆಯರ ಬಳಗದ ಅದ್ಯಕ್ಷರಾದ ಸಿದ್ದಲಿಂಗ ಬಾಳಿ ಮಾತನಾಡಿ, ದೇಶದ ಮೊಟ್ಟಮೊದಲ ಗೃಹ ಮಂತ್ರಿಗಳಾಗಿ ಪರಿಣಾಮಕಾರಿ ರಾಜನೀತಿ, ದೂರದೃಷ್ಠಿಯೊಂದಿಗೆ ಪಟೇಲರು ಜಟೀಲ ಪರಿಸ್ಥಿತಿಗಳನ್ನು ತಿಳಿಗೊಳಿಸಿದರು. ಅವರ ಉಕ್ಕಿನಂತಹ ನಿರ್ಧಾರಗಳಿಂದ, ರೈತಪರವಾದ ಹೋರಾಟಗಳು, ಬಾರ್ಡೋಲಿ ಸತ್ಯಾಗ್ರಹ, ಬ್ರೀಟಿಷರ ಕಂದಾಯ ನೀತಿಯ ವಿರುದ್ಧ ಪಟೇಲರು ಕೈಗೊಂಡ ಹೋರಾಟಗಳು ಇವತ್ತಿಗೂ ಸ್ಮರಣೀಯ. ಸರ್ದಾರ ಪಟೇಲರ ಸ್ಮರಣೆಯ ಮೂಲಕ ರಾಷ್ಟ್ರೀಯ ಏಕತೆಯನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ತಾಲ್ಲೂಕ ಅಧ್ಯಕ್ಷ ಮಹೇಶ ಬಾಳಿ, ಶಿವಕುಮಾರ ಸರಡಗಿ, ಶಾಂತಮಲ್ಲಪ್ಪ ಬಾಳಿ, ವಿಜಯಕುಮಾರ ಪರಮದೊಡ್ಡಿ, ಈರಣ್ಣ ಹಳ್ಳಿ, ಅಂಬರೀಷ ವಲಂಡಿ, ಅನೀಲ ಕುಮಾರ ಬಾಳಿ ವಿಜಯಕುಮಾರ ದಂಡೋತಿ, ಸಿದ್ಧಲಿಂಗ ಮದಗುಣಕಿ, ಅಭಿಲಾಷ ಹೌದೆ, ವಿರೇಶ ಬಾಳಿ, ಸುಶೀಲಸುತ್ರಾವೆ,ಬನವೇಶ, ಶರಣು, ಅಭೀಷೇಕ, ಸೌರವ ಕಾಳೇಕರ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಕ್ಷಕ ಬಸವರಾಜ ಬಳವಾಟ ನಿರೂಪಿಸಿ ವಂದಿಸಿದರು.