
ರಾಯಚೂರು,ಏ.೫- ನಗರದ ಹರಿಜನವಾಡ ಬಡಾವಣೆಯಲ್ಲಿ ಹಸಿರು ಕ್ರಾಂತಿಯ ಹರಿಕಾರ,ಮಾಜಿ ಉಪಪ್ರಧಾನಮಂತ್ರಿಗಳಾದ ಡಾ.ಬಾಬುಜಗಜೀವನ ರಾಂ ಅವರ ೧೧೬ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ನಂತರ ಹರಿಜನವಾಡ ಬಡಾವಣೆಯಿಂದ ಬೈಕ್ ರ್ಯಾಲಿ ಮೂಲಕ ನಗರದ ರೈಲ್ವೆ ನಿಲ್ದಾಣ ಬಳಿ ಇರುವ ಡಾ.ಬಾಬುಜಗಜೀವನ್ ರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಯಿತು.
ಈ ಸಂದರ್ಭದಲ್ಲಿ ಯುವ ಸೇವಾ ಸಮಿತಿಯ ಮುಖಂಡರು ಈರಣ್ಣ,ಚಂದ್ರು, ಶಿವಶಂಕರ್,ಪೃಥ್ವಿ ರಾಜ್,ಮಣಿ ಸೇರಿದಂತೆ ಸಮಾಜದ ಯುವಕರು ಇದ್ದರು.