ಹರವಿ: ಬಸವೇಶ್ವರ ರಥೋತ್ಸವ

ಸಿರವಾರ: ಏ.೧೨- ತಾಲೂಕಿನ ಹರವಿ ಗ್ರಾಮದ ಆರಾಧ್ಯದೈವ ಶ್ರೀ
ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದಲ್ಲಿ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಭಕ್ತರಿಂದ ಹರಕೆ ಪೂರೈಕೆ, ಕೈಂಕರ್ಯಗಳು ಜರುಗಿದವು. ಸಾಯಂಕಾಲ ಪಲ್ಲಕ್ಕಿ ಉತ್ಸವ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಇದರಲ್ಲಿ ಮಾನ್ವಿ ,ಸಿರವಾರ ತಾಲೂಕಿನ ಭಕ್ತರು ಭಾಗವಹಿಸಿದ್ದರು.