ಹರವಿ: ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಮೇವು-ಟ್ರಾಲಿ ಭಸ್ಮ

ಸಿರವಾರ.ಮೇ.೦೪- ಜಾನುವಾರುಗಳ ಆಹಾರಕ್ಕೆಂದು ಮೇವು ಸಂಗ್ರಹ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿ ಮೇವು ಹಾಗೂ ಟ್ರ್ಯಾಕ್ಟರ್ ಟ್ರಾಲಿ ಸ್ಥಳದಲ್ಲೆ ಭಸ್ಮವಾದ ಘಟನೆ ತಾಲೂಕಿನ ಹರವಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಜರುಗಿದೆ.
ತಾಲೂಕಿನ ಹರವಿ ಗ್ರಾಮದ ಸೀಮಾಂತರದ ೮೯ ವಿತರಣಾ ಕಾಲುವೆಯ ರಸ್ತೆ ಮೂಲಕ ಹರವಿ ಗ್ರಾಮಕ್ಕೆ ಹೋಗುತ್ತಿದ್ದ ಮೇವು ಟ್ರ್ಯಾಕ್ಟರ್‌ಗೆ ಮೇಲೆ ವಿದ್ಯುತ್ ಕಂಬದ ತಂತಿ ತಗುಲಿದ್ದು ಬೆಂಕಿ ಹತ್ತಿಕೊಂಡಿದೆ ತಕ್ಷಣ ನೋಡಿದ ಟ್ರ್ಯಾಕ್ಟರ್ ಡ್ರೈವರ್ ಟ್ರಾಲಿಯನ್ನು ಬಿಟ್ಟು ಮುಂದೆ ಟ್ರ್ಯಾಕ್ಟರ್ ಹೋಯ್ದಿದ್ದರಿಂದ ಅನಾಹುತ ತಪ್ಪಿದಂತಾಗಿದೆ, ನಂತರ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು ಅವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಟ್ರ್ಯಾಕ್ಟರ್ ಟ್ರಾಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು, ಟ್ರ್ಯಾಕ್ಟರ್ ಟ್ರಾಲಿ ಹಾಗೂ ಮೇವು ಸೇರಿ ಸುಮಾರು ೨ ಲಕ್ಷದ ವರೆಗೂ ನಷ್ಟವಾಗಿದೆ ಎಂದು ಟ್ರ್ಯಾಕ್ಟರ್ ಮಾಲೀಕ ವಾಲೇಕರ್ ಶರಣಪ್ಪ ಸಂಜೆವಾಣಿಗೆ ತಿಳಿಸಿದ್ದಾರೆ.