
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 4 : – ಕಳೆದ ರಾತ್ರಿ ಹರವದಿ ಕ್ರಾಸ್ ಬಳಿ ನರಸಿಂಹಗಿರಿಗೆ ಹೋಗುತ್ತಿರುವ ಬೈಕ್ ಸವಾರರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಜರುಗಿದೆ.
ನರಸಿಂಹಗಿರಿಗೆ ಹೋಗುತ್ತಿರುವಾಗ ಬೈಕಿನ ಲಾಂಗ್ ಲೈಟ್ ಬೆಳಕಿನಲ್ಲಿ ಚಿರತೆಯೊಂದು ರಸ್ತೆದಾಟುತ್ತಿದ್ದು ಆ ಲೈಟ್ ಬೆಳಕಿನಲ್ಲಿ ಚಿರತೆಯ ಫೋಟೋ ಸಹ ಕ್ಲಿಕ್ಕಿಸಿದ್ದು ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ಸಂಚಾರ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಪ್ರತ್ಯಕ್ಷದರ್ಶಿಗಳು ಜನತೆಗೆ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.