ಹರಮನೆ ಸಂಚಿಕೆ ಕಾರ್ಯಕ್ರಮ

ಲಕ್ಷ್ಮೇಶ್ವರ,ಜು.20: ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಪಟ್ಟಣದ ಸತೀಶ್ ಬೊಮ್ಲೆ ಅವರ ನಿವಾಸದಲ್ಲಿ ಹರಮನೆ – 5 ಸಂಚಿಕೆ ಕಾರ್ಯಕ್ರಮ ಜರುಗಿತು. ಲಕ್ಷ್ಮೀಬಾಯಿ ಬೊಮ್ಲೆ ಅವರು ಸಂತ ಜ್ಞಾನೇಶ್ವರ ಮತ್ತು ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪಂಚಮಸಾಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಮಾಗಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಈಶ್ವರ ಮೆಡ್ಲೇರಿಯವರು ಮಾತನಾಡಿ ಫಲಾಪೇಕ್ಷೆ ಇಲ್ಲದೆ ಜಗತ್ತಿಗೆ ಏನನ್ನಾದರೂ ನೀಡವು ಸಾರ್ಥಕತೆಯೊಂದಿಗೆ ಹೊಲ, ಬೆಳೆ, ಪಶು, ಪಕ್ಷಿ, ಪ್ರಾಣಿ, ಗಿಡ, ಮರಗಳೊಂದಿಗೆ ಬದುಕು ಕಟ್ಟಿಕೊಳ್ಳುವ ಪಂಚಮಸಾಲಿ ಸಮಾಜವು ರೈತ ವೃತ್ತಿಯಿಂದ ಜಗತ್ತಿಗೆ ನಿಸ್ವಾರ್ಥವಾಗಿ ಅನ್ನ ನೀಡುವ ಕಾರ್ಯ ಮಾಡುತ್ತಿದೆ. ಎಲ್ಲ ಸಮಾಜದವರನ್ನು ಸಮಾನ ದೃಷ್ಟಿಯಿಂದ ಕಾಣುವ ಪಂಚಮಸಾಲಿ ಸಮಾಜವು ಕೈಗೊಂಡಿರುವ ಕಾರ್ಯ ಪ್ರಶಂಸನೀಯ ಎಂದರು.
ಪಟ್ಟಣದಲ್ಲಿ ಕಾಯಕ ಸಂಸ್ಕೃತಿಯ ಭಾವಸಾರ ಕ್ಷತ್ರಿಯ ಸಮಾಜವು ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಸಾಗುತ್ತಿರುವದು ಹೆಮ್ಮೆ ಎಂದರು. ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹರಮನೆ ಮುಖಾಂತರ ಮನೆಮನ ಬೆಳಗಿಸಿ ನಮ್ಮ ಪರಂಪರೆ ಬಿಂಬಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರಮೇಶ ನವಲೆ, ಸತೀಶ ಮಾಂಡ್ರೆ, ಕಿರಣ ನವಲೆ, ಹರಿಹರ ಪೀಠದ, ದಾಸೋಹ ಮಠದ, ಶಿವಣ್ಣ, ಷಣ್ಮುಖಪ್ಪ, ಶಿವಾನಂದಪ್ಪ, ಡಿ.ಎಚ್ ಪಾಟೀಲ್, ಬಿ.ಎಂ. ಕುಂಬಾರ, ಎಂ.ಎಂ. ಶಿಗ್ಲಿ, ಎನ್.ಎಂ. ಭರಮಗೌಡರ, ಹೆಚ್.ಎಫ್ ನದಾಫ್, ಬಿ.ಎಸ್ ಹರ್ಲಾಪುರ್, ಎಸ್.ಎಫ್ ಆದಿ, ಸೋಮಶೇಖರ ಕೆರಿಮನಿ, ನಾಗರಾಜ ಕಳಸಾಪುರ, ನಿಂಗಪ್ಪ ಜಾವೂರ, ಸತೀಶ ಬೋಮಲೆ ಸೇರಿದಂತೆ ಅನೇಕರಿದ್ದರು. ಚಂದ್ರು ನೇಕಾರ, ಸಂತೋಷ್ ಜಾವೂರ ನಿರ್ವಹಿಸಿದರು.