ಹರಬ್ ಮೊಹಲ್ಲ ಬಡಾವಣೆಗೆ ರವಿ ಬೋಸರಾಜು ಭೇಟಿ-ಸ್ವಚ್ಚತೆ ಬಗ್ಗೆ ಜಾಗೃತಿ

ರಾಯಚೂರು.ಡಿ.೧೦- ನಗರದ ಹರಬ್ ಮೊಹಲ್ಲಾ ಬಾಡವಣೆಯಲ್ಲಿ ರೈಲ್ವೆ ಹಳಿಯ ಪಕ್ಕದ ಚರಂಡಿ ಸ್ವಚ್ಚತೆ ಹಾಗೂ ಕಸ ವಿಲೆವಾರಿ ಕುರಿತು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭೇಟಿ ನೀಡಿ ಸಂಪೂರ್ಣ ಸ್ವಚ್ಚತೆ ಬಗ್ಗೆ ವೀಕ್ಷಿಸಿ ಜಾಗೃತಿ ಮೂಡಿಸಿದರು.
ಬಡಾವಣೆಯಲ್ಲಿ ಜನರು ಸ್ವಚ್ಚತೆಯನ್ನು ಕಾಪಾಡಬೇಕು ಪ್ಲಾಸ್ಟಿಕ್ ಹಾಗೂ ದಿನಬಳಕೆಯ ವಸ್ತುಗಳನ್ನು ಚರಂಡಿಗೆ ಬಿಸಾಕಬಾರದು. ನಗರಸಭೆಯ ಕಸವಿಲೆವಾರಿ ವಾಹನಗಳು ಬಡಾವಣೆಗೆ ಬರುತ್ತಿದ್ದು ಹಸಿ ಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುದ್ದಾಸಿರ್, ನಗರಸಭೆಯ ಸಿಬ್ಬಂದಿ ವಿನೋದ್, ಜಗದೀಶ್ ಭಂಡಾರಿ, ನಯೀಮ್ ಬಾಬಾ ಕುಮಾರ್ ಸೇರಿದಂತೆ ನಗರಸಭೆ ಸ್ವಚ್ಚತಾ ಸಿಬ್ಬಂದಿಗಳು ಇದ್ದರು.