ಹರಪಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ ಜನವರಿಯಿಂದ ಗ್ರಾಮಸೇವಾ ಯೋಜನೆ:ಆನಂದ್ ಸಿಂಗ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.01: ಹಳ್ಳಿಗಳ ಜನತೆ ತಮಗೆ ಬೇಕಾದ ನಾಗರೀಕ ಸೌಲಭ್ಯಗಳನ್ನು ಪಡೆಯಲು ಇನ್ನುಮುಂದೆ ನಗರ ಪ್ರದೇಶಗಳಿಗೆ ಬರುವುದು ಬೇಕಿಲ್ಲ. ರಾಜ್ಯ ಸರ್ಕಾರ ಆನ್‍ಲೈನ್‍ನಲ್ಲಿಯೇ ಎಲ್ಲಾ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಸೇವಾ ಯೋಜನೆಯನ್ನು ಬರುವ ಜನವರಿ 26 ರಿಂದ ರಾಜ್ಯದಲ್ಲಿ ಜಾರಿಗೆ ತರಲಿದೆಂದು ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಅವರು ಇಂದು ವಿಧಾನ ಪರಿಷತ್ತಿನ ಚುನಾವಣೆ ಹಿನ್ನಲೆಯಲ್ಲಿ ಹರಪನಹಳ್ಳಿ ಮಂಡಲದಿಂದ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಪರವಾದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಸಧ್ಯ ರಾಜ್ಯದ ಐದು ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ ನಂತರ ಇತರೇ ಜಿಲ್ಲೆಗಳಿಗೂ ವಿಸ್ತರಿಸಲಿದೆ. ರಾಜ್ಯದ 750 ಗ್ರಾಮ ಪಂಚಾಯತ್‍ಗಳಿಗೆ ಸರ್ವತೋಮುಖ ಅಭಿವೃದಿ ಮಾಡಲು ಸಂಕಲ್ಪ ಮಾಡಿದೆ ಎಂದು ತಿಳಿಸಿದರು. ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿ ಅವರು, ಈವರೆಗೆ ಬರೀ ಸುಳ್ಳು ಹೇಳಿ ಮತಪಡೆದು. ಮತ ನೀಡಿದವರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಅವರ ಮಾತನ್ನು ಮತ್ತೆ ನಂಬಬೇಡಿ ಎಂದರು.
ಸಚಿವ ಶ್ರೀರಾಮುಲು ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ಅವರು ಉತ್ತಮರು ವಿದ್ಯಾವಂತರು, ಮಹಾ ದಾನಿಗಳು. ಇವರಿಗೆ ಮತ ನೀಡಿ ಗೆಲ್ಲಿಸಿದರೆ ನಿಮ್ಮ ಗ್ರಾಮಗಳ ಅಭಿವೃದ್ದಿಗೆ ಸಹಕರಿಸಲಿದ್ದಾರೆ. ಕಾಂಗ್ರೆಸ್‍ನವರು ನಾವು ಹಾಗೆ ಗೆಲ್ಲುತ್ತೇವೆ, ಹೀಗೆ ಗೆಲ್ಲುತ್ತೇವೆ ಎಂದು ಬರೀ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಯೋಜನೆಗಳ ಮೂಲಕ ದೇಶ ಅಭಿವೃದ್ದಿ ಹೊಂದುತ್ತಿರುವಾಗ ಅವರಿಗೆ ಸಹಕಾರಿಯಾಗಲು ಎಲ್ಲರೂ ಬಿಜೆಪಿಗೆ ಮತ ನೀಡಬೇಕು ಎಂದರು.
ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲತ ಅಭ್ಯರ್ಥಿಗಳೇ ಹೆಚ್ಚಿನದಾಗಿ ಆಯ್ಕೆಯಾಗಿದ್ದು ಅವರೆಲ್ಲ ಅಭ್ಯರ್ಥಿ ಸತೀಶ್ ಅವರನ್ನು ಗೆಲ್ಲಿಸುವುದು ಖಚಿತ ಎಂದರು.
ಅಭ್ಯರ್ಥಿ ಸತೀಶ್ ಅವರು ಮಾತನಾಡಿ, ನಾನು ವ್ಯವಹಾರ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೃಪ್ತಿಯಿಂದ ಇದ್ದೆ. ಜೊತೆಗೆ ರಾಜಕೀಯದ ಮೂಲಕ ಜನ ಸೇವೆ ಮಾಡಬೇಕೆಂದು ಬಂದಿದ್ದು. ಗ್ರಾಮಗಳ ಅಭಿವೃದ್ದಿ ಬಗ್ಗೆ ನಾನು ಒಂದಿಷ್ಟು ಸಹಕಾರ  ಮಾಡಬೇಕು ಎಂದುಕೊಂಡಿದ್ದು ಅದಕ್ಕೆ ನೀವು ಮತ ನೀಡಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾ ಅಧ್ಯಕ್ಷ ಚೆನ್ನಬಸನಗೌಡ, ಮುಖಂಡರಾದ ಹೆಚ್.ಹನುಮಂತಪ್ಪ, ಮುರಾರಿಗೌಡ, ಮಂಡಲ ಅಧ್ಯಕ್ಷ ಹಾಲೇಶ್, ಡಾ.ಮಹಿಪಾಲ್, ದಮ್ಮೂರ್ ಶೇಖರ್ ಮೊದಲಾದವರು ಉಪಸ್ಥಿತರಿದ್ದರು