ಹರಪನಹಳ್ಳಿ;  ಸಂಕ್ರಾAತಿ ನಾಟಕೋತ್ಸವ.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಜ19; ಪಟ್ಟಣ ಹಳೆ ಬಸ್‌ನಿಲ್ದಾಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಇಂದಿನಿಂದ ಜ. 21ರವರೆಗೆ ಮೂರು ದಿನಗಳ ಕಾಲ ಸಂಕ್ರಾAತಿ ನಾಟಕೋತ್ಸವ ನಡೆಯಲಿದೆ. ಎಂ.ಪಿ.ರವೀAದ್ರ ಪ್ರತಿಷ್ಠಾನ ವತಿಯಿಂದ ಪ್ರತಿದಿನ ಸಂಜೆ 6ರಿಂದ 10ರವರೆಗೆ ಸಾಣೇಹಳ್ಳಿ ಶಿವಸಂಚಾರ ರಂಗ ಕಲಾವಿದರಿಂದ ಜಯಂತ ಕಾಯ್ಕಿಣಿ ರಚನೆಯ ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ಜತೆಗಿರುವನು ಚಂದಿರ, ಕೆ.ಎನ್.ಸಾಳುಂಕೆ ರಚನೆಯ ಮಾಲತೇಶ್ ಆರ್.ಬಡಿಗೇರ ನಿರ್ದೇಶನದ ತಾಳಿಯ ತಕರಾರು ಹಾಗೂ ಡಾ.ನಟರಾಜ ಬೂದಾಳ್ ರಚನೆಯ ಸಿ.ಬಸವಲಿಂಗಯ್ಯ ನಿರ್ದೇಶನದ ಕಲ್ಯಾಣದ ಬಾಗಿಲು ಎನ್ನುವ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತ ವೈಶಿಷ್ಯಪೂರ್ಣ ನಾಟಕ ಪ್ರದರ್ಶನಗಳು ನಡೆಯಲಿದ್ದು ತಾಲೂಕಿನ ಹಾಗೂ ಪಟ್ಟಣದ ಸಾರ್ವಜನಿಕರು ವೀಕ್ಷಿಸಬೇಕು ಎಂದು ಶಾಸಕಿ ಹಾಗೂ ಎಂ.ಪಿ.ರವೀAದ್ರ ಪ್ರತಿಷ್ಠಾನದ ಅಧ್ಯಕ್ಷೆ ಎಂ.ಪಿ.ಲತಾ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ಕೋರಿದ್ದಾರೆ.