ಹರಪನಹಳ್ಳಿ ಶ್ರೀ ವೀರಭದ್ರೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ನ.10: ಪಟ್ಟಣದ ಹಳೇ ಬಸ್‍ನಿಲ್ದಾಣದ ಸಾರಿಬಯಲಿನಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವವು ಮಂಗಳವಾರ ರಾತ್ರಿ ಅಪಾರ ಭಕ್ತರ ಮದ್ಯೆ ಅತ್ಯಂತ ವೈಭವದಿಂದ ಜರುಗಿತು.
ಚಂದ್ರಗ್ರಹಣ ಮೋಕ್ಷದ ನಂತರ ರಥೋತ್ಸವದ ಕಾರ್ಯಕ್ರಮ ಆರಂಭವಾಗಿದ್ದು ದೇವರ ಪಟವನ್ನು ಜಜ್ಜೂರಿ ಗುರುಶಾಂತಪ್ಪನವರು 1.10ಲಕ್ಷ ರು.ಗಳಿಗೆ ಪಡೆದುಕೊಂಡರು.
ನೂತನ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಉಜ್ಜಯಿನಿ ಜಗದ್ಗುರು ಸಿದ್ದಲಿಂಗದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಭಾರತವು ಮಂದಿರ, ಮಠಗಳ ದೇಶ, ವೀರಭದ್ರೇಶ್ವರ ಸ್ವಾಮಿ ಸಾವಿರಾರು ವರ್ಷಗಳ ಇತಿಹಾಸವಿದ್ದು, ಶಿಷ್ಟರ ರಕ್ಷಕ, ದುಷ್ಟರ ಸಂಹಾರ ಮಾಡುವ ವೀರಭದ್ರಸ್ವಾಮಿಯ ತತ್ವಗಳನ್ನು ಸರ್ವರು ಅಳವಡಿಸಿಕೊಳ್ಳಬೇಕು. ಆಂಜನೇಯ ಸ್ವಾಮಿಗೆ ಲಿಂಗಧಾರಣೆ ಮಾಡಿದ ಶಕ್ತಿ ವೀರಭದ್ರಸ್ವಾಮಿಗೆ ಇದ್ದು, ಲೋಕಕಲ್ಯಾಣಕ್ಕಾಗಿ ಪರಿಪೂರ್ಣವಾಗಿ ನಡೆದಿದ್ದಾರೆ ಎಂದು ಹೇಳಿದರು.
ಸರಿಯಾಗಿ 7.30ನಿಮಿಷಕ್ಕೆ ನೂತನ ರಥದ ಗಾಲಿಗಳು ಉರುಳಿದಾಗ ಭಕ್ತರು ಜಯಘೋಷ ಕೂಗಿ, ಶ್ರೀ ವೀರಭದ್ರಸ್ವಾಮಿಗೆ ಭಕ್ತಿಯನ್ನು ಸಮರ್ಪಿಸಿದರು.
ಹಿರಿಯ ಸಿವಿಲ್ ನ್ಯಾಯಾದೀಶೆ ಎಂ.ಭಾರತಿ, ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿ, ಧರ್ಮದರ್ಶಿಗಳಾದ ಪ್ರವೀಣಕುಮಾರ, ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಪ್ರಧಾನ ಅರ್ಚಕರಾದ ವೀರಮಲ್ಲಪ್ಪ ಪೂಜಾರ, ಷಣ್ಮುಖಪ್ಪ ಪೂಜಾರ, ಹಾಗೂ ಚಂದ್ರಶೇಖರ ಪೂಜಾರ, ಶಶಿಧರ ಪೂಜಾರ, ಟಿ.ಎಂ.ಚಂದ್ರಶೇಖರಯ್ಯ, ಪಿ.ಬಿ.ಗೌಡ, ಎಂ.ರಾಜಶೇಖರ, ಐಗೋಳು ಚಿದಾನಂದಪ್ಪ, ಎನ್.ಕೊಟ್ರೇಶ್, ಎಂ.ಅಜ್ಜಣ್ಣ, ರಥಶಿಲ್ಪಿ ಚನ್ನೇಶ ಬಡಿಗೇರ, ವೀರೇಶ ಆಚಾರ, ಐ.ಕೊಟ್ರೇಶ, ಗೊಂಗಡಿ ನಾಗರಾಜ, ಟಿ.ಎಂ.ವಿಶ್ವನಾಥ, ಗೊಂಗಡಿ ಯಜಮಾನ ವರುಣ, ಪುರವಂತರ ಕೊಟ್ರೇಶ, ವೀರಭದ್ರಪ್ಪ, ದಂಡೆಪ್ಪನವರ ವೀರಭದ್ರಪ್ಪ, ಕಾರ್ತಿಕ, ಹಾಗೂ ದೈವಸ್ಥರು, ಬಾಬ್ತುದಾರರು ಇತರರು ಇದ್ದರು.