ಹರಪನಹಳ್ಳಿ; ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಕರುಣಾಕರರೆಡ್ಡಿ

ಹರಪನಹಳ್ಳಿ.ಏ.೧೬ : ಬಿಜೆಪಿ ಪಕ್ಷದ ಅಭ್ಯರ್ಥಿ, ಹಾಲಿ ಶಾಸಕ ಜಿ.ಕರುಣಾಕರ ರೆಡ್ಡಿ  ಸಾವಿರಾರು ಬೆಂಬಲಿಗರೊAದಿಗೆ ಆಗಮಿಸಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ಮುನ್ನ ಕುಟುಂಬ ಸಮೇತರಾಗಿ ದೇವರ ತಿಮ್ಲಾಪುರ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಊರಮ್ಮ ದೇವಸ್ಥಾನ, ಜೈನರ ಬಸದಿ, ಗಣೇಶ ದೇವಸ್ಥಾನ ಮತ್ತು ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಪಕ್ಷದ ಮುಖಂಡರೊಟ್ಟಿಗೆ ತಾಲ್ಲೂಕು ಆಡಳಿತ ಸೌಧಕ್ಕೆ ಮೆರವಣಿಗೆ ಮೂಲಕ ತೆರಳಿದರು.ಐ.ಬಿ. ವೃತ್ತದವರೆಗೂ ತೆರೆದ ವಾಹನದಲ್ಲಿ ಬಂದ ಅವರು, ಅಲ್ಲಿಂದ ಸ್ವಂತ ವಾಹನದ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬಿಜೆಪಿ ಪಕ್ಷ ಯಾರನ್ನೂ ಕಡೆಗಣಿಸಿಲ್ಲ, ಮುಂದೆ ಅಸಮಧಾನ ಸರಿಯಾಗುತ್ತದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮತ್ತೊಮ್ಮೆ ಕರುಣಾಕರ ರೆಡ್ಡಿ ಬಹುಮತಗಳಿಂದ ಗೆಲ್ಲುತ್ತಾರೆ ಎಂದು ಹೇಳಿದರು.ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಪಕ್ಷದ ಹೈಕಮಾಂಡ್, ಕಾರ್ಯಕರ್ತರ ಬೆಂಬಲದಿAದ ನಾಲ್ಕನೇ ಬಾರಿಗೆ ನಾಮಪತ್ರ ಸಲ್ಲಿಸಿರುವೆ. 224 ಕ್ಷೇತ್ರಗಳಲ್ಲೂ ಪಕ್ಷದ ಮುಖಂಡರಲ್ಲಿ ಅಸಮಧಾನವಿದೆ, ಇದಕ್ಕೆ ನನ್ನ ಕ್ಷೇತ್ರ ಹೊರತಾಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ಒಗ್ಗಟಿನಿಂದ ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್ ಸೇರಿದಂತೆ, ಕೆಲವು ಟಿಕೆಟ್ ಆಕಾಂಕ್ಷಿಗಳು ಗೈರಾಗಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಪುರಸಭೆ ಅಧ್ಯಕ್ಷ ಎಚ್.ಎಂ.ಅಶೋಕ, ಬಾಗಳಿ ಕೊಟ್ರೇಶಪ್ಪ, ಆರ್. ಲೋಕೇಶ್, ಎಂ.ಮಲ್ಲೇಶ್, ಮೆಹಬೂಬ್ ಸಾಬ್, ಪತ್ನಿ ವನಜಾ, ಪುತ್ರರಾದ ವಿಷ್ಣುವರ್ಧನ ರೆಡ್ಡಿ, ಶಶಿಧರ್ ರೆಡ್ಡಿ ಸೇರಿದಂತೆ ಅನೇಕ ಮುಖಂಡರಿದ್ದರು.