ಹರಪನಹಳ್ಳಿ ಬಿಜೆಪಿ ಟಿಕೆಟ್ ಕರುಣಾಕರ ರೆಡ್ಡಿಗೆ ಘೋಷಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.13: ನಗರದವರೇ ಆದ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರಿಗೆ ಬಿಜೆಪಿ ಎರಡನೇ ಪಟ್ಟಿಯಲ್ಲಿ ಹರಪನಹಳ್ಳಿ ಯಿಂದ ಮತ್ತೆ ಸ್ಪರ್ಧೆ ಮಾಡಲು ಟಿಕೆಟ್ ಘೋಷಣೆ ಮಾಡಿದೆ.
ನಿರೀಕ್ಷೆಯಂತೆ  ಮೊದಲ  ಪಟ್ಟಿಯಲ್ಲಿಯೇ ಪ್ರಕಟವಾಗಬೇಕಿತ್ತು. ಆದಾವ ಕಾರಣಕ್ಕೆ ತಪ್ಪಿತ್ತೋ ತಿಳಿಯದು. ಆದರೆ ನಿನ್ನೆ ರಾತ್ರಿ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಘೋಷಣೆ ಆಗಿದೆ.
ಹರಪನಹಳ್ಳಿಯಿಂದ ಇವರು 2008 ಮತ್ತು 2018 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. 2008 ರಲ್ಲಿ ದಿ. ಉಪ ಮುಖ್ಯ ಮಂತ್ರಿ ಎಂ.ಪಿ.ಪ್ರಕಾಶ್ ಅವರನ್ನು ಸೋಲಿಸಿದ್ದರು. ಆದರೆ
ಈ ಕ್ಷೇತ್ರದಿಂದ 2013 ರಲ್ಲಿ ಪ್ರಕಾಶ್ ಅವರ ಪುತ್ರ ಎಂ.ಪಿ.ರವೀಂದ್ರ ಅವರಿಂದ ಸೋಲು ಕಂಡಿದ್ದರು.
ಸೇಡಿಗೆ ಸೇಡು ಎಂಬಂತೆ  2018 ರಲ್ಲಿ ರವೀಂದ್ರ ಅವರನ್ನು ಸೋಲಿಸಿದರು. ಈಗ ಎಂ.ಪಿ.ಪಿ ಅವರ ಪುತ್ರಿಯರು  ಸೇತಿದಂತೆ ಹಲವರು ಇವರ ವಿರುದ್ದ ಸ್ಪರ್ಧೆಗೆ ಸಿದ್ದತೆ ನಡೆಸಿದ್ದಾರೆ. ಕರುಣಾಕರ ರೆಡ್ಡಿ ಅವರು ಮೂರನೇ ಬಾರಿಗೆ ವಿಧಾನ ಸೌದ ಪ್ರವೇಶ ಏನಾಗಲಿದೆ ಎಂಬುದರ ಬಗ್ಗೆ ಕ್ಷೇತ್ರದ ಮತದಾರ ತೀರ್ಮಾನ ಮಾಡಬೇಕಿದೆ.