ಹರಪನಹಳ್ಳಿ ಬಳಿ ತೈಲ ಟ್ಯಾಂಕರ್ ಪಲ್ಟಿ
ಬೆಂಕಿ ಹೊತ್ತಿ ಓರ್ವ ಸಾವು


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜು 24 : ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಬಿದ್ದು ಬೆಂಕಿ ಹೊತ್ತಿಕೊಂಡು  ಧಗಧಗನೆ ಉರಿದ ಘಟನೆ  ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ ರಸ್ತೆಯ ರೈಲ್ವೇ ಗೇಟ್  ಬಳಿ  ಇಂದು ನಡೆದಿದ್ದು, ಘಟನೆಗೆ ಲಾರಿಯಲ್ಲಿನ ತಾಂತ್ರಿಕ ದೋಷ ಕಾರಣ ಇರಬಹುದು ಎಂದು  ಅಂದಾಜಿಸಲಾಗಿದೆ.
 ಈ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದಾನೆ ವಿವರ ತಿಳಿದು ಬಂದಿಲ್ಲ.
ಡೀಸೆಲ್ ಟ್ಯಾಂಕ್ ಪಲ್ಟಿಯಾಗಿ ಬೆಂಕಿ ಸ್ಪರ್ಶ ಆಗಿ  ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.  ದಟ್ಟವಾದ ಹೊಗೆ ಕಾಣಿಸಿಕೊಂಡು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿ, ಮುಂದೇನಾಗುತ್ತದೆಯೋ ಎಂದು ಸ್ಥಳೀಯರು ಭಯಭೀತರಾಗುವಂತಾಗಿತ್ತು.‌ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬೆಟ್ಟ ದಲ್ಲಿ ರಸ್ತೆ ಏರಲು ಲಾರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಆಯ ತಪ್ಪಿ ಕೆಳಗೆ ಉರಿಳಿದೆ.
ಹರಪನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.