ಹರಪನಹಳ್ಳಿ ಪ್ರೆಸ್ ಕ್ಲಬ್ಗೆ ಅಧ್ಯಕ್ಷರಾಗಿ ಸತೀಶ್ ಕುಮಾರ್ ಆಯ್ಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.04: ಪ್ರೆಸ್ ಕ್ಲಬ್ ಹರಪನಹಳ್ಳಿ ಸಂಘಕ್ಕೆ ಸಂಜೆ ವಾಣಿ ದಿನ ಪತ್ರಿಕೆಯ ವರದಿಗಾರರಾದ ಎಸ್.ಎನ್. ಸತೀಶ್ ಕುಮಾರ್ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಲೋಕ ದರ್ಶನ ಪತ್ರಿಕೆ ವರದಿಗಾರರಾದ ಹೆಚ್.ಕೆ.ಅರ್ಜುನ್ ಆಯ್ಕೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಿನ ಪತ್ರಿಕೆಯ ಸದಸ್ಯರ ಸಾಮಾನ್ಯಸಭೆ ಹಾಗೂ ಎಲ್ಲಾರ ಒಪ್ಪಿಗೆಯ ಮೇರೆಗೆ ಅಧ್ಯಕ್ಷ, ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಸಂಘದ ನೂತನ ಪದಾಧಿಕಾರಿಗಳನ್ನು ಕೆಲವೇ ದಿನಗಳಲ್ಲಿ ನೇಮಿಸಿಕೊಳ್ಳಲಾಗುವುದೆಂದು ಹರಪನಹಳ್ಳಿ ಪ್ರಸ್ ಕ್ಲಬ್ ನ ಹಿರಿಯ ವರದಿಗಾರ ಪ್ರಗತಿ ಪರ ಚಿಂತಕ ಅಲಗಿಲವಾಡದ ಎ.ಎಂ. ವಿಶ್ವನಾಥ್ ಅವರು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ವಾಯ್ಸ್ ಆಫ್ ಲಂಕೇಶ್ ಪತ್ರಿಕೆಯ ಸಂಪಾದಕ ಅಣಜಿಗೇರೆ ಕೊಟ್ರೇಶ್, ಪಬ್ಲಿಕ್ ವೈಬ್ ವಾಹಿನಿಯ ವರದಿಗಾರ ಮಂಜ್ಯನಾಯ್ಕ, ಕಾಂತ್ರಿದೀಪ ಪತ್ರಿಕೆ ವರದಿಗಾರಾದ ಭಂಗಿ ಚಂದ್ರಪ್ಪ, ಸ್ವಾತಂತ್ರ್ಯ ಹೋರಾಟ ವರದಿಗಾರ ಬಿದಾಡಿ. ರಮೇಶ್, ದಿ ಡೈಲಿ ನ್ಯೂಸ್ ವರದಿಗಾರ ಬಿ.ನಾಗರಾಜ್, ಹಸಿರು ಕ್ರಾಂತಿ ವರದಿಗಾರ ಬಸವರಾಜ ದೊಡ್ಮನೆ, ಹೊಸಪೇಟೆ ಟೈಮ್ಸ್ ವರದಿಗಾರ ಪ್ರತಾಪ್ ಚಲುವಾದಿ, ಸುರ್ವಣವಾಹಿನಿ ವರದಿಗಾರ ಶಬ್ಬಿರ್ ಸಾಹೇಬ್ ನಂದಿಬೆವೊರು, ದಾವಣಗೆರೆ ಇಮೇಜ್ ವರದಿಗಾರ ಮೈಲಾರಿ, ವಿಜಯನಗರವಾಣಿ ವರದಿಗಾರ ಶಿಶಿಕುಮಾರ್, ಕಿತ್ತೂರು ಕರ್ನಾಟಕ ವರದಿಗಾರ ಜೈರಾಜ್ ಸಿಂಗ್, ಜನಕೂಗು ವರದಿಗಾರ ಪಟ್ನಮದ್ ಬಸವರಾಜ್,