ಹರಪನಹಳ್ಳಿ ತಾಲ್ಲೂಕಿನಲ್ಲಿ ಭಗಿರಥ ಜಯಂತ್ಯೋತ್ಸವ.

ಸಂಜೆವಾಣಿವಾರ್ತೆ 

ಹರಪನಹಳ್ಳಿ ಮೇ.16; ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಶ್ರೀ ಭಗಿರಥ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.ಪಟ್ಟಣದ ತಾಲೂಕು ಮಿನಿವಿಧಾನಸೌಧದಲ್ಲಿ ರಾಷ್ಟಿçÃಯ ಹಬ್ಬಗಳ ಸಮಿತಿ ಹಾಗೂ ಉಪ್ಪಾರ ಸಮುದಾಯದಿಂದ ಶ್ರೀ ಭಗಿರಥ ಜಯಂತಿಯನ್ನು ಆಚರಿಸಲಾಯಿತು. ಭಾವಚಿತ್ರಕ್ಕೆ ಪೂಜೆ ನೇರವೇರಿಸಿ, ಪುಷ್ಪ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ ಗಿರೀಶಬಾಬು, ಉಪ್ಪಾರ ಸಮುದಾಯದ ಅಧ್ಯಕ್ಷ ಎಂ.ಮಾರಪ್ಪ, ಉಪಾಧ್ಯಕ್ಷ ಬಣಕಾರ ರಾಜಪ್ಪ, ಕೊಳಚಿ ಭೀಮಪ್ಪ, ಎಸ್.ಹೆಚ್.ಬಸವರಾಜ ಶೃಂಗಾರತೋಟ, ಸಹಕಾರ್ಯದರ್ಶಿ ಹನುಮಂತಪ್ಪ, ವಸಂತ, ಮಹೇಶ, ಎನ್.ಹನುಮಂತಪ್ಪ, ಎಚ್.ಶಿವರಾಜ, ಸೇರಿದಂತೆ ಇತರರು ಇದ್ದರು.ತಾಲೂಕಿನ ತಿಪ್ಪನಾಯಕನಹಳ್ಳಿ, ಯಲ್ಲಾಪುರ, ಧ್ಯಾಪನಹಳ್ಳಿ, ಓಬಳಾಪುರ, ಎರಡೆತ್ತಿನಹಳ್ಳಿ, ಉಪ್ಪಾರಗೇರಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅದ್ದೂರಿಯಾಗಿ ಭಗಿರಥ ಜಯಂತಿ ಆಚರಿಸಲಾಯಿತು.