ಹರಪನಹಳ್ಳಿ ತಾಲೂಕಿನ 146ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸದ ಭಾಗ್ಯ.

ಸಂಜೆವಾಣಿವಾರ್ತೆ 

ಹರಪನಹಳ್ಳಿ,ಜ.೨೭; ಕರ್ನಾಟಕ ಪ್ರವಾಸೋದ್ಯಮ ಇಲಾಖೆವತಿಯಿಂದ ತಾಲೂಕಿನ 32 ಶಾಲೆಗಳ 146 ಮಕ್ಕಳು ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಿದರು.ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಬಳಿ ಗುರುವಾರ ಕ್ಷೇತ್ರಸಮನ್ವಯಾಧಿಕಾರಿ ಹೊನ್ನತ್ತೆಪ್ಪ ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮೂಖಪ್ಪ ಪ್ರವಾಸ ತೆರಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶಿಕ್ಷಣ ಸಂಯೋಕರಾದ ಕಬೀರನಾಯ್ಕ, ಮಹಮದ್ ಘನೀಪ್ ವಿದ್ಯಾರ್ಥಿಗಳಿಗೆ ಪ್ರವಾಸದ ಕಿಟ್ ಗಳನ್ನು ವಿತರಿಸಿದರು.ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ರಾಜಶೇಖರ ಮಾತನಾಡಿ ಓದಿದ ಜ್ಞಾನಕ್ಕಿಂತ ಶೈಕ್ಷಣಿಕ ಪ್ರವಾಸದಲ್ಲಿ ನೋಡಿದ ಸ್ಥಳಗಳು ತುಂಬಾ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮನೋಹರ, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಪ್ರೌಢ ಶಾಲಾಮುಖ್ಯೋಪಾದ್ಯರ ಸಂಘದ ಅಧ್ಯಕ್ಷ ಕೆ.ಶಿವಾನಂದಪ್ಪ, ಮುಖ್ಯೋಪಾದ್ಯಯ ರುದ್ರಚಾರಿ, ಸಿ.ಮೋಹನ, ಗುರಪ್ಪ ಪವರ್ ಇತರರು ಇದ್ದರು..

.