ಹರಪನಹಳ್ಳಿ ತಾಲೂಕಿನೆಲ್ಲೆಡೆ ಶ್ರೀರಾಮನ ಸಂಭ್ರಮ

ಸAಜೆವಾಣಿವಾರ್ತೆ

ಹರಪನಹಳ್ಳಿ.ಜ.೨೩; ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ಹರಪನಹಳ್ಳಿ ತಾಲೂಕಿನೆಲ್ಲೆಡೆ ವಿವಿದ ದೇಗುಲಗಳಲ್ಲಿ ವಿಶೇಷ ಪೂಜೆ ನೇರವೇರಿಸುವ ಮೂಲಕ ಸಂಬ್ರಮ ಕಳೆಕಟ್ಟಿತ್ತು.ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ತೆಂಗಿನ ಗರಿ, ಮಾವಿನ ತಳೀರು ತೋರಣ ಹಾಗೂ ಬಾಳೆಕಂಬಗಳಿAದ ಮತ್ತು ದೇವಸ್ಥಾನದ ಮುಂಬಾಗ ಪೆಂಡಾಲ್‌ಗಳನ್ನು ಹಾಕಲಾಗಿತ್ತು.ಎಲ್ಲಾ ದೇಗುಲಗಳಲ್ಲಿ ಬೆಳಿಗ್ಗೆ ಯಿಂದಲೇ ಅಭಿಷೇಕ ಹಾಗೂ ವಿಶೇಷ ಪೂಜೆಗಳೊಂದಿಗೆ ಪುಷ್ಪಗಳಿಂದ ಅಲಂಕರಿಸಲಾಗಿದೆ. ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಗೋಕರ್ಣೇಶ್ವರ ದೇವಸ್ತಾನ, ಐ.ಬಿ.ವೃತ್ತದ ಉಕ್ಕಡದ ಆಂಜನೇಯಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೇರವೇರಿಸಿ, ಮಜ್ಜಿಗೆ, ಪಾನಕ, ಕೊಸಂಬಿ, ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. ಪಟ್ಟಣ ಕೊಟ್ಟೂರು ವೃತ್ತದಲ್ಲಿ ಶ್ರೀರಾಮನ ಬೃಹತ್ ಪ್ಲೆಕ್ಸ್, ಕೆಸರಿ ಬಾವುಟ್, ಬಂಟಿAಗ್ಸ್ಗಳನ್ನು ಅಳವಡಿಸಲಾಗಿತ್ತು. ಮೇಗಳಪೇಟೆಯಲ್ಲಿ ರಾತ್ರಿಯಿಂದಲೇ ಬಂಟಿAಗ್ ಅಳವಡಿಸಿ, ಭಾಗವಧ್ವಜ, ಶ್ರೀರಾಮನ ಕಟೌಟ್ ಅಳವಡಿಸಿದ್ದರು.ಪಟ್ಟಣದ ತೆಲುಗರ ಓಣಿಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮನಿಗೆ ಅಭಿಷೇಕ ನೇರವೇರಿಸಿ, ವಿಶೇಷ ಪೂಜೆಯನ್ನು ನೇರವೇರಿಸಿ. ಪ್ರಸಾದ ವಿತರಿಸಲಾಯಿತು. ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಆರ್ಯವೈಶ್ಯ ಸಮಾಜ ಮತ್ತು ಹಿಂದೂ ಸಮಾಜದ ಸಹಯೋಗದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಅಲಂಕಾರ ಮಹಾಮಂಗಳಾರತಿ, ಪ್ರಸಾದ ವಿತರಣೆಯನ್ನು ಮಾಡಲಾಯಿತು.ಆಯೋದ್ಯ ಶ್ರೀರಾಮನಿಗೆ 1ಲಕ್ಷ ದೇಣಿಗೆ : ಪಟ್ಟಣದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹಾಗೂ ಕುಟುಂಬದವರು 1ಲಕ್ಷದ 1ರೂ.ಗಳ ಚೆಕ್‌ನ್ನು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರಿಗೆ ನೀಡುವ ಮೂಲಕ ಅಯೋದ್ಯೆಯ ಶ್ರೀರಾಮ ದೇವರಿಗೆ ದೇಣಿಗೆಯನ್ನು ನೀಡಿದ್ದಾರೆ.51 ಅಡಿ ಭಾಗವದ್ವಜ ನೀಡಿಕೆ: ಪಟ್ಟಣದ ಶಶಿಕಾಂತ ಪಟಗಿ ಹಾಗೂ ತಂಡದವರು ಅಯೋದ್ಯೆಯಲ್ಲಿನ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ 51 ಅಡಿ ಉದ್ದದ ಕೆಸರಿ ಬಾವುಟವನ್ನು ಅಯೋದ್ಯೆಗೆ ತೆರಳಿ ಒಪ್ಪಿಸಿದ್ದಾರೆ.ಮೋದಿಯವರು ಮತ್ತೋಮ್ಮೆ ಪ್ರಧಾನಿಯಾಗುತ್ತಾರೆ : ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ ಅಯೋದ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಈಡೀ ದೇಶದ ರಾಮ ಭಕ್ರದಲ್ಲಿ ಸಂಭ್ರಮ ಮಾಡಿದೆ, ಎಲ್ಲೆಡೆ ಅನ್ನದಾಸೋಹ, ವಿಶೇಷ ಪೂಜೆಗಳನ್ನು ನಡೆಯುತ್ತಿವೆ. ಕಳೆದ 500ವರ್ಷಗಳಿಂದ ಮಾಡಿದ ಹೋರಾಟ ಸಾರ್ಥಕವಾಗಿದೆ ಎಂದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸವಿದ್ದು, ಸರಯೂ ನದಿಯಲ್ಲಿ ಸ್ನಾನ ಮಾಡಿ, ಶ್ರೀರಾಮ ಮಂದಿರ ಉದ್ಘಾಟನೆಗೆ ಸಾಕ್ಷಿಯಾಗಿದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.ವಿಶೇಷ ಪೂಜೆಯಲ್ಲಿ ಮಾಜಿ ಕಂದಾಯ ಸಚಿವ ಜಿ.ಕರುಣಾಕರೆಡ್ಡಿ, ವಿಷ್ಣುವರ್ಧನರೆಡ್ಡಿ, ಪುರಸಭೆ ಸದಸ್ಯರಾದ ಹೆಚ್.ಎಂ.ಅಶೋಕ, ಕಿರಣ್ ಶ್ಯಾನಬಾಗ್, ಗೌಳಿ ವಿನಯಕುಮಾರ, ಮುಖಂಡರಾದ ಆರುಂಡಿ ನಾಗರಾಜ, ಆರ್.ಲೋಕೇಶ, ಬಾಗಳಿ ಕೊಟ್ರೇಶಪ್ಪ, ಕೌಟಿ ವಾಗೀಶ್, ಡಿಶ್ ವೆಂಕಟೇಶ್, ಮಲ್ಲೇಶ್, ಸೇರಿದಂತೆ ಇತರರು ಇದ್ದರು.

_ _ _ _