ಹರಪನಹಳ್ಳಿ ಟಿಎಪಿಸಿಎಂಎಸ್‍ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹರಪನಹಳ್ಳಿ, ನ.14: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಪ್ರೇಮಕುಮಾರ ಗೌಡ, ಉಪಾಧ್ಯಕ್ಷರಾಗಿ ಮಂಜಪ್ಪ ತಳವಾರ ಆಯ್ಕೆಯಾಗಿದ್ದಾರೆ
ಸರ್ಕಾರಿ ನಾಮ ನಿರ್ದೇಶಿತ ಸೇರಿ 15 ಸದಸ್ಯ ಬಲ ಹೊಂದಿರುವ ಟಿಎಪಿಸಿಎಂಎಸ್‍ಗೆ ನಿನ್ನೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಪಿ.ಪ್ರೇಮಕುಮಾರ ಗೌಡ, ಬಿ.ಕೆ.ಪ್ರಕಾಶ್, ಉಪಾಧ್ಯಕ್ಷ ಸ್ಥಾನಕ್ಕೆ ಮಂಜಪ್ಪ ತಳವಾರ ಹಾಗೂ ಯು.ಹನುಮಂತಪ್ಪ ನಾಮಪತ್ರ ಸಲ್ಲಿಸಿದ್ದರು
ಗುಪ್ತ ಮತದಾನದ ಮೂಲಕ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಬಯಸಿದ ಅಭ್ಯರ್ಥಿ ಪ್ರೇಮಕುಮಾರ ಅವರಿಗೆ 9 ಮತಗಳು, ಬಿ.ಕೆ. ಪ್ರಕಾಶ್‌ ಅವರಿಗೆ 6 ಮತಗಳು, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಂಜಪ್ಪ ತಳವಾರ ಅವರಿಗೆ 9 ಮತಗಳು, ಯು. ಹನುಮಂತಪ್ಪ ಅವರಿಗೆ 6 ಮತಗಳು ಚಲಾವಣೆಯಾದವು. ಇಬ್ಬರು ಪರಾಭವಗೊಂಡರು. ಪಿ. ಪ್ರೇಮಕುಮಾರ ಗೌಡ, ಮಂಜಪ್ಪ
ತಳವಾರ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಮಂಜುನಾಥ ಗೊಂಧಿ ಘೋಷಣೆ ಮಾಡಿದರು
ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಬಿ.ಪರುಶುರಾಮಪ್ಪ, ಸಹಾಯಕ ಚುನಾವಣಾಧಿಕಾರಿ ಎಸ್. ಮಂಜುಳಾ, ಟಿ. ತಿರುಪತಿ, ಎಂ. ರಾಜಶೇಖರ್, ವಕೀಲ ಎಂ. ಅಜ್ಜಣ್ಣ, ಶಶಿಧರ ಪೂಜಾರ್, ಎಚ್.ಕೆ. ಹಾಲೇಶ್, ಎಸ್. ಮಂಜಣ್ಣ, ಮುತ್ತಿಗಿ ಸಾಬಳ್ಳಿ ಜಂಬಣ್ಣ, ಎಂ.ಟಿ. ಬಸವನಗೌಡ, ಪಿ.ಟಿ. ಭರತ್, ಲಾಟಿ ದಾದಾಪೀರ್, ಭರತ್, ಬಾಣದ ಅಂಜಿನಪ್ಪ, ಡಿ.ನೇಮ್ಯಾನಾಯ್ಕ, ಪಿ.ವೇದನಾಯ್ಕ, ಚಿರಸ್ತಹಳ್ಳಿ ಪಿ.ಮರಿಯಪ್ಪ, ಉಮಾಪತಿ ಇತರರು ಇದ್ದರು