ಹರಪನಹಳ್ಳಿ ಜಿಲ್ಲೆಗಾಗಿ ಉಪವಾಸ ಆರಂಭ

ಹರಪನಹಳ್ಳಿ ನ 22 : ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆ ರಚನೆಗೆ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಹರಪನಹಳ್ಳಿ ಜಿಲ್ಲೆ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಟ್ಟಣದ ಪ್ರವಾಸಿ ಮಂದಿರದ ಹೋರಾಟ ಸಮಿತಿಯ ಟೆಂಟ್‍ನಲ್ಲಿ ಶನಿವಾರ ಮೌಲ್ವಿ ಖಾಜಿ ಮುಸ್ತಾಕ್‍ಅಹ್ಮದ್ ಅವರು ಅನಿರ್ಧಿಷ್ಟಾವಧಿ ಅಮರಣಾಂತರ ಉಪವಾಸ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಉಪವಾಸ ಆರಂಭಿಸಿರುವ ಮೌಲ್ವಿ ಖಾಜಿ ಮುಸ್ತಾಕ್‍ಅಹ್ಮದ್ ಮಾತನಾಡಿ, ಹರಪನಹಳ್ಳಿ ಜಿಲ್ಲೆ ಘೋಷಣೆ ಆಗುವವರೆಗೂ ಉಪವಾಸ ನಿಲ್ಲಿಸುವುದಿಲ್ಲ. ಈ ಸಂಬಂಧ ನನ್ನ ಜೀವ ಹೋದರೂ ಚಿಂತೆಯಿಲ್ಲ. ನಾನು ಸತ್ತರೂ ಕೂಡ ಖಬರಸ್ತಾನಕ್ಕೆ ದೇಹ ತೆಗೆದುಕೊಂಡ ಹೋಗಬಾರದು, ಜಿಲ್ಲೆ ಘೋಷಣೆ ಆದ ನಂತರವೇ ನನ್ನ ಸಂಸ್ಕಾರ ಮಾಡಬೇಕು ಎಂದು ಘೋಷಿಸಿದರು.