ಹರಪನಹಳ್ಳಿ ಘಟಕದಲ್ಲಿ ಚಾಲಕರ ದಿನಾಚರಣೆ : ಚಾಲಕರಿಗೆ ಹೂವು, ಸಿಹಿ ನೀಡಿದ ಘಟಕ ವ್ಯವಸ್ಥಾಪಕರು.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಜ.24; ಎಂತಹ ತುರ್ತು ಪರಿಸ್ಥಿತಿಯಲ್ಲೂ ಸಹ ತಮ್ಮ ಕುಟುಂಬದ ರಕ್ಷಣೆ ನೋಡದೆ ಪ್ರಯಾಣೀಕರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಚಾಲಕರಿಗೆ ಇರುತ್ತದೆ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಹರಪನಹಳ್ಳಿ ಸಾರಿಗೆ ವ್ಯವಸ್ಥಾಪಕಿ ಮಂಜುಳಾರವರು ತಿಳಿಸಿದರು.ಪಟ್ಟಣದ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ಹರಪನಹಳ್ಳಿ ಘಟಕದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್‌ಗಳ ಚಾಲಕ, ನಿರ್ವಹಕರಿಗೆ ಗುಲಾಬಿ ಹೂವನ್ನು ನೀಡಿ, ಸಿಹಿ ಕೊಟ್ಟು ಚಾಲಕರ ದಿನಾಚರಣೆಯ ಶುಭಾಶಯ ಕೋರಿ ಚಾಲಕರನ್ನು ಕುರಿತು ಮಾತನಾಡಿದರು.ಯಾವುದೇ ಹಬ್ಬ,ಉತ್ಸವಗಳು ಬಂದರು ರಜೆ ಇಲ್ಲದೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಮ್ಮಲ್ಲಿ ಎಷ್ಟೇ ನೋವು ನಲಿವು ಕಷ್ಟ ಕಾರ್ಪಣ್ಯಗಳಿದ್ದರೂ ಅವುಗಳನ್ನ ಬದಿಗೊತ್ತಿ ಪ್ರತಿದಿನ ತಮ್ಮ ಬಸ್ಸಿನ ಸಾರಿಗೆ ರಥವನ್ನು ತೆಗೆದುಕೊಂಡು ಶಾಲಾ, ಕಾಲೇಜು, ಮಹಿಳೆಯರು, ವೃದ್ದರು, ಆಸ್ಪತ್ರೆಗೆ ತೆರಳುವವರು, ಇತರೆ ಪ್ರವಾಸಕ್ಕೆ ಹೋಗುವ ಪ್ರಯಾಣೀಕರನ್ನು ಅವರ ಸ್ಥಳಗಳಿಗೆ ಬಿಟ್ಟು. ಸುರಕ್ಷಿತವಾಗಿ ಹೋಗಿ ಬನ್ನಿ ಎಂದು ಹೇಳುವುದೆಂದರೆ ಅದು ಸಾರಿಗೆ ನೌಕರರು ಮಾತ್ರ ಆಗಿದ್ದಾರೆ. ಯಾವುದೇ ಕಚೇರಿಗೆ ಒಬ್ಬ ಅಧಿಕಾರಿ ಬಾರದಿದ್ದರು ನಡೆಯುತ್ತದೆ ಆದರೆ ಚಾಲಕರು ಬಾರದೆ ಇದ್ದರೆ ಅಂದಿನ ಕೆಲಸಗಳಿಗೆ ತೊಂದರೆಯಾಗಲಿದೆ ಎಂದರು.ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸ್ತಿçÃಶಕ್ತಿ ಯೋಜನೆಯಿಂದ ಚಾಲಕ, ನಿರ್ವಾಹಕರಿಗೆ ಹೆಚ್ಚಿನ ಜವಾಬ್ದಾರಿ ಬಂದಿದೆ, ಅವರಿಗೆ ಎಷ್ಟೆ ಒತ್ತಡ ಇದ್ದರು ಪ್ರಾಮಾಣೀಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಾರಿಗೆ ಸಂಸ್ಥೆಗೆ ಕಿರಿಟವಾಗಿದ್ದಾರೆ ಎಂದ ಅವರು ನಮ್ಮ ಘಟಕದಲ್ಲಿ ಒಟ್ಟು 200 ಚಾಲಕ,ನಿರ್ವಾಹಕ ಸಿಬ್ಬಂಧಿಗಳಿದ್ದಾರೆ ಚಾಲಕರ ದಿನಾಚರಣೆ ಅಂಗವಾಗಿ ಪ್ರಶಸ್ತಿಯನ್ನು ನೀಡಲಾಗುವುದು ಅದು ಯಾರಿಗೆ ನೀಡಿದರು ಚಾಲಕರಿಗೆ ಸಲ್ಲುತ್ತದೆ. ಇದರಲ್ಲಿ ಉತ್ತಮ ಚಾಲಕರಿಗೆ ಪ್ರಶಸ್ತಿಯನ್ನು ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಘಟಕದ ಚಾಲಕ, ಸಿಬ್ಬಂಧಿಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎಟಿಐ ಶಂಕರ, ಗಿರಿಯಪ್ಪ, ಸೋಮಶೇಖರ, ಕೃಷ್ಣ, ಸೇರಿದಂತೆ ಚಾಲಕ, ನಿರ್ವಾಕ ಹಾಗೂ ಇತರೆ ಸಿಬ್ಬಂಧಿಗಳು ಇದ್ದರು.