ಹರಪನಹಳ್ಳಿ ಕ್ಷೇತ್ರದಿಂದ ಮಾಜಿ ಸಚಿವ ಎನ್ ಎಂ ನಬೀ ಸ್ಪರ್ಧೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 9 :- ಮಾಜಿ ಸಚಿವ ಎನ್ ಎಂ ನಬೀ ಅವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸುವಂತೆ ಹರಪನಹಳ್ಳಿ ತಾಲೂಕಿನ ಜೆಡಿಎಸ್ ಮುಖಂಡರು ಕಾರ್ಯಕರ್ತರು ಸ್ವಾಗತಿಸಿದ್ದು ಬಹುತೇಕ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸುವುದು ಖಚಿತವೆಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ಪಟ್ಟಣದ ಮಾಜಿ ಸಚಿವ ಎನ್ ಎಂ ನಬೀ ನಿವಾಸದಲ್ಲಿ ಅಪಾರ ಬೆಂಬಲಿಗರ ಸಭೆ ಕರೆದಿದ್ದು ಸಭೆಯಲ್ಲಿ ಭಾಗವಹಿಸಿದ್ದ ಹರಪನಹಳ್ಳಿ ಭಾಗದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮುಂಬರುವ ಚುನಾವಣೆಗೆ ಮಾಜಿ ಸಚಿವ ನಬೀ ಅವರು ಸ್ಪರ್ದಿಸಬೇಕು ಎಂದರಲ್ಲದೆ ರಾಜ್ಯದಲ್ಲಿ ಜೆಡಿಎಸ್ ರಾಜ್ಯನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ತತ್ವಾದರ್ಶಗಳು ಅವರ ಜನಪರ ಕಾಳಜಿ ಮತ್ತೊಮ್ಮೆ ಈ ಭಾರಿ ಅಧಿಕಾರ ಗದ್ದುಗೆ ಹಿಡಿಯುವ ಬಗ್ಗೆ ನಂಬಿಕೆ ಇದೆ. ಅದೇ ರೀತಿ ನಬೀ ಅವರು ಕೂಡ್ಲಿಗಿ ಕ್ಷೇತ್ರದಲ್ಲಿ ಗೆದ್ದು ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಮಾಡಿರುವ ಕೆಲಸಗಳು ಈಗಲೂ ಜನಮಾನಸದಲ್ಲಿ ಉಳಿದಿವೆ ಎಂದು ತಿಳಿಸಿದ್ದಾರೆ.
ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ,ಬಳ್ಳಾರಿ  ಇತರೆ ಭಾಗದ ಮುಖಂಡರು, ಕಾರ್ಯಕರ್ತರು ಪಟ್ಟಣ ಪಂಚಾಯತಿ ಸದಸ್ಯರು  ಭಾಗವಹಿಸಿದ್ದರು.