ಹರಪನಹಳ್ಳಿ ಎಸ್ ಯುಜೆಎಂ ಕಾಲೇಜಿನಪ್ರಾಚಾರ್ಯರಾಗಿ ಹೆಚ್.ಮಲ್ಲಿಕಾರ್ಜುನ ನೇಮಕ

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜು.೧೨: ಪಟ್ಟಣದ ಎಸ್.ಯು.ಜೆ.ಎಂ.ಕಾಲೇಜಿನ ಪ್ರಾಚಾರ್ಯರಾಗಿ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಧಕಾರ ಸ್ವೀಕರಿಸಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿರುವ ಎಸ್.ಯು.ಎಸ್.ಜೆ. ಕಾಲೇಜಿನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಹರಪನಹಳ್ಳಿ ಎಸ್.ಯು.ಜೆ.ಎಂ.ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಉಜ್ಜಯಿನಿ ಜಗದ್ಗುರುಗಳ ಆಶೀರ್ವಾದದಿಂದ, ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಂ.ಎಂ.ಜೆ. ಹರ್ಷವರ್ಧನರವರ ಆದೇಶ ಮತ್ತು ಮಾರ್ಗದರ್ಶನದ ಮೇರೆಗೆ ಪ್ರಾಚಾರ್ಯರಾಗಿದ್ದು, ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಉಪನ್ಯಾಸಕರ, ಸಿಬ್ಬಂದಿಯವರ ಸಹಾಯ, ಸಹಕಾರದಿಂದ ಕಾಲೇಜಿನ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೆಚ್.ಮಲ್ಲಿಕಾರ್ಜುನ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್ ಬಿ ಸೋಮರೆಡ್ಡಿ, ಎಸ್ ಚನ್ನಬಸಪ್ಪ, ಎಮ್ ಚಿಕ್ಕಪ್ರಸಾದ, ಎಸ್ ಕೊಟ್ರೇಶ್, ಆತ್ಮಾನಂದ, ಸಿ ಪ್ರವೀಣ, ಟಿಎಂ ಜಯದೀಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಭಾರಿ ಪ್ರಾಚಾರ್ಯರಾಗಿದ್ದ ಬಿ ಕೃಷ್ಣಮೂರ್ತಿ ಅಧಿಕಾರ ಹಸ್ತಾಂತರಿಸಿದರು.