ಹರಪನಹಳ್ಳಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ

ಹರಪನಹಳ್ಳಿ. ಮಾ.೭; ಸಂತ ಸೇವಲಾಲ್ ಜಯಂತಿಯ ಶಿವಪ್ರಕಾಶ್ ಮಹರಾಜ್ ಅವರ ನೇತೃತ್ವದಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ಐಬಿ ವೃತ್ತದಲ್ಲಿ ತಾಲೂಕು ಬಂಜಾರ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸಂತ ಸೇವಲಾಲ್ ಜಯಂತಿಯನ್ನು ಆಚರಿಸಲಾಯಿತು.ಶಾಸಕ ಜಿ.ಕರುಣಾಕರ ರೆಡ್ಡಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಸಂತ ಸೇವಲಾಲ್ ರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿದ ನಂತರ ಪೂಜೆ ಸಲ್ಲಿಸಿ ಈ ವೇಳೆ ಯುವಕರು ಡಿಜೆಗೆ ಹೆಜ್ಜೆ ಹಾಕುತಿದ್ದನ್ನು ನೋಡಿ ಸಂತೋಷ ಪಟ್ಟರು ನಂತರ ಯುವಕರು ಶಾಸಕರ ಜೋತೆಗೆ ಸೆಲ್ಪಿ ತೆಗೆಯುವಲ್ಲಿ ನಾ ಮುಂದೆ ತಾ ಮುಂದೆ ಎನ್ನವಂತೆ ಫುಲ್ ಬ್ಯೊಸಿ ಆಗಿದ್ದರು.ನಂತರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲತ ಮಲ್ಲಿಕಾರ್ಜುನ ಬೇಟಿ ನೀಡಿ ಭಕ್ತಿ ಸಮರ್ಪಿಸಿ ಯುವತಿ ಜೊತೆಗೆ ಹೆಜ್ಜೆ ಹಾಕಿ ಸಂತೋಷ ಪಟ್ಟರು.ಬೆಳಗ್ಗೆ ಹನ್ನೊಂದು ಗಂಟೆಯಿAದ ಐದು ಗಂಟೆಗಳ ಕಾಲ ಅದ್ದೂರಿ ಮೆರವಣಿಗೆ ಮಾಡಯಿತು ಶಿವಪ್ರಕಾಶ್ ಮಹರಾಜ್ ಸ್ವಾಮಿಗಳು ಭಾಗಿಯಾಗಿದ್ದರುಸಮಾಜ ಮುಖಂಡರಾದ ಠಿಟಜ ಬ್ಯಾಂಕ್ ಅಧ್ಯಕ್ಷ ಪೋಮ್ಯಾನಾಯ್,ಮುಖಂಡ ಧರ್ಮಾನಾಯ್ಕ,ತಾಂಡ ನಿಗಮ ನಿರ್ದೇಶಕ ಎಸ್.ಪಿ.ಲಿಂಬ್ಯಾನಾಯ್ಕ ,ಮಂಜ್ಯಾನಾಯ್ಕ ಹರಿಶ್ ನಾಯ್ಕ,ಮಂಜ್ಯಾನಾಯ್ಕ ರಾಜು ನಾಯ್ಕ ಸಂಜುನಾಯ್ಕ ಪಂಪಾನಾಯ್ಕ ಶಶಿನಾಯ್ಕ,ಚಂದ್ರನಾಯ್ಕ ಹಾಗೂ ತಾಲೂಕಿನ ಎಲ್ಲಾ ತಾಂಡದ ಹಿರಿಯರು ವಿದ್ಯಾರ್ಥಿಗಳು ಭಾಗಿಯಾಗಿದ್ದರು