ಹರಪನಹಳ್ಳಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ.

ಹರಪನಹಳ್ಳಿ,ಜೂ.೬; ಕೇಂದ್ರ ಸರ್ಕಾರ ಪೆಟ್ರೂಲ್ ಹಾಗೂ ಡಿಸಿಲ್ ಏರಿಕೆ ಖಂಡಿಸಿ ಯುವ ಕಾಂಗ್ರೇಸ್ ವತಿಯಿಂದ ಪ್ರತಿಭಟಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ತಾಲ್ಲೂಕು ಯುವ ಕಾಂಗ್ರೇಸ್ ಅದ್ಯಕ್ಷ ಮತ್ತೂರು ಬಸವರಾಜ ಮಾತನಾಡಿ ಕೇಂದ್ರ ಸರ್ಕಾರ  ಕಾರ್ಪೋರೇಟ್ ಲಾಬಿಗೆ ಮಣಿದು ಬಡವರನ್ನು ಇನ್ನು ಬಡವರನ್ನಾಗಿ ಮಾಡಲು  ಹೋರಟಿದೆ. ಸರ್ಕಾರ ಪೆಟ್ರೋಲ್. ಡಿಸೇಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತ ಬರುತ್ತಿದ್ದು ಮೇತಿಂಗಳಿನಿಂದ ಇಲ್ಲಿಯ ವರೆಗೆ  18 ಬಾರಿ ದರ ಏರಿಕೆ ಮಾಡಿದೆ ಲಾಕ್ ಡೌನ ನಿಂದ ಸ್ತಬ್ದವಾಗಿರುವ ಆರ್ಥಿಕ ಚಟುವಟಿಕೆಗಳು ಸೇರಿ ಹಲವು ಸಮಸ್ಯೆಗಳು ನಾಳೆಗಳ ದಾರಿಯ ಮೇಲೆ ದಟ್ಟವಾದ ಕಾರ್ಮೊಡ  ಕವಿದಂತಾಗಿದ್ದು ಕೋವಿಡ್ ಸಂಕಷ್ಟದ ಮಧ್ಯೆ ಆರ್ಥಿಕ ಸ್ಥಿತಿ ಸಂಪೂರ್ಣ ನೆಲಕಚ್ಚಿರುವ ಹೊತ್ತಿನಲ್ಲಿ ಈ ಬೆಲೆ ಏರಿಕೆಗಳು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಗಂಬಿರ ಪರಿಣಾಮ ಬೀರಿ ವಿನಾಶಕಾರಿ ಯಾಗವುದರಲ್ಲಿ ಅನುಮಾಮವಿಲ್ಲ. 

ಜನರ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಕುಸಿದಿರುವಾಗ ದಿನದಿಂದ ದಿನಕ್ಕೆ  ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಶೋಚಿನೀಯ ಸಂಗತಿಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತು ಕೋಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಕಿಡಿಕಾರಿದರು.
ಜಿಲ್ಲಾ ಯುವ ಕಾಂಗ್ರೇಸ್  ಪ್ರಧಾನ ಕಾರ್ಯದರ್ಶಿ  ರಿಯಾಜ್,ಜೀಷನ್ ಹ್ಯಾರಿಸ್, ಉಪಾದ್ಯಕ್ಷ ದಾದಪೀರ್ ಮಕರಬ್ಬಿ,ಪ್ರಧಾನ ಕಾರ್ಯದರ್ಶಿ ಸಾಧಿಕ್ ಸಾಲಮೂರಳ್ಳಿ, ಜಬೀವುಲ್ಲಾ, ಜಾವೀದ್,  ಎನ್.ಎಸ್.ಯು.ಐ ಅದ್ಯಕ್ಷ ಶ್ರೀಕಾಂತ ಯಾದವ, ಲಿಂಗರಾಜ್  ಸೇರಿದಂತೆ ಇತರರು ಇದ್ದರು.