ಹರಪನಹಳ್ಳಿಯಲ್ಲಿ ಟೈಲರ್ ಸಹಾಯಕರ ಫೆಡರೇಷನ್ ಪ್ರತಿಭಟನೆ

ಹರಪನಹಳ್ಳಿ.ನ.೧೦; ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ಟೈಲರ್ ಮತ್ತು ಸಹಾಯಕರ ಫೆಡರೇಷನ್ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಗ್ರಾಮದ ಟೈಲರ್‌ಗಳು ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಜಮಾಯಿಸಿದ ನೂರಾರು ಟೈಲರ್‌ಗಳು, ಟೈಲರ್‌ಗಳ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ?ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಟೈಲರ್‌ಗಳು ಸರ್ಕಾರಿ ಸವಲತ್ತುಗಳಿಲ್ಲದೇ ಬಳಲುತ್ತಿದ್ದಾರೆ. ಪುರುಷರು, ಮಹಿಳಾ ಟೈಲರ್‌ಗಳು ಮನೆಗಳಲ್ಲಿ ಹೊಲಿಗೆ ಯಂತ್ರದ ಮೂಲಕ ಬಟ್ಟೆಗಳನ್ನು ಹೊಲಿದು ಜೀವನ ನಡೆಸುತ್ತಿದ್ದಾರೆ. ಈ ವರ್ಗಕ್ಕೆ ಕಾರ್ಮಿಕರ ಕಾಯ್ದೆ ಅನ್ವಯಿಸದಿರುವುದು ವಿಪರ್ಯಾಸ? ಎಂದು ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ತಿಳಿಸಿದರು.

ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಮಾತನಾಡಿ ಚಿಕ್ಕ ಅಂಗಡಿಗಳಿಂದ ದೊಡ್ಡ ಗಾರ್ಮೆಂಟ್ಸ್ ಘಟಕದವರೆಗೂ ಟೈಲರ್‌ಗಳು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ೨೦ ಲಕ್ಷದಷ್ಟು ಸಂಖ್ಯೆಯಲ್ಲಿದ್ದಾರೆ. ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣ ಪಡೆದವರು ಸಹ ಇದೇ ವೃತ್ತಿಯನ್ನು ಅವಲಂಬಿಸಿದ್ದಾರೆ. ಅವರಿಗೂ ಸಾಮಾಜಿಕ ನ್ಯಾಯ ದೊರಕಬೇಕು? ಎಂದು ಆಗ್ರಹಿಸಿದರು. ಟೈಲರ್ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯಗಳೂ ಟೈಲರ್‌ಗಳಿಗೂ ದೊರಕುವಂತಾಗಬೇಕು? ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಮುಖಂಡರಾದ ಬಳಿಗನೂರು ಕೊಟ್ರೇಶ್, ಸುಮಾ, ದ್ವಾರಕೀಶ್, ಅರಸೀಕೆರೆ ಮಲ್ಲೇಶ್, ಗುಡಿಹಳ್ಳಿ ಬಸಮ್ಮ, ಕೊಟ್ರಯ್ಯ ಟಿ.ಎಂ, ರೇವಣಸಿದ್ದಯ್ಯ, ನಾಗರಾಜ ಇಪ್ಪಿನಗೇರೆ, ಪವಿತ್ರಮ್ಮ, ನೇತ್ರಾವತಿ, ಹೀನಾ ಕೌಸರ್, ನಜೀನಾಬಾನು, ಬಳಿಗನೂರು ಅಕ್ಷತಾ, ಬಳಿಗನೂರು ರೇಖಾ, ಪ್ರಸಾದ್, ಭಾಗಿರತಿ, ವೈ. ರೂಪಾ, ತೌಡೂರು ಎ.ಎಂ. ಕವಿತಾ ಇದ್ದರು.