ಹರಪನಹಳ್ಳಿಯಲ್ಲಿ ಅವಾಜ್ ದಿವಸ್ ಆಚರಣೆ


ಜಗಳೂರು.ನ.೨೧; ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ ಅವಾಜ್ ದಿವಸ್ ಆಚರಣೆ ಮತ್ತು ಅವಾಜ್ ಸಪ್ತಾಹ ಜಾಗೃತಿ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯ್ಕ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಅರ್ಹ ವಸತಿರಹಿತರಿಗೆ ಶಾಶ್ವತ ಸೂರು ಕಲ್ಪಿಸಲು ಅವಕಾಶ ನೀಡಲಾಗಿರುತ್ತದೆ.ಮತ್ತು ೨೦೧೬-೧೭ ನೇ ಸಾಲಿನಿಂದ ಇಂದಿರಾ ಆವಾಸ್ ಯೋಜನೆ ಯನ್ನು ಮರುನಾಮಕರಣ ಮಾಡಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಎಂಬ ಹೆಸರಿನಲ್ಲಿ ಗ್ರಾಮೀಣ ಪ್ರದೇಶದ ಅರ್ಹ ವಸತಿ ರಹಿತರಿಗೆ ವಸತಿ ಸೌಲಭ್ಯ ಮತ್ತು ಗ್ರಾಮೀಣ ಇಂದಿರಾ ನಿವೇಶನ ಯೋಜನೆಯಡಿ ಅರ್ಹ ನಿವೇಶನರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ೨೦೧೬ -೧೭ ನೇ ಸಾಲಿನಿಂದ ೨೦೧೦- ೧೧ ನೇ ಸಾಲಿನ ಸಾಮಾಜಿಕ ಆರ್ಥಿಕ ಜನಗಣತಿ ಸಮೀಕ್ಷೆಯಲ್ಲಿ ವಸತಿ ನಿವೇಶನ ರೈತ ಎಂದು ಗುರುತಿಸಲ್ಪಟ್ಟ ವರಿಗೆ ನಮ್ಮ ತಾಲೂಕು ವ್ಯಾಪ್ತಿಯಡಿ ಪಿ ಎಂ ಜಿ ವೈ ಯೋಜನೆಯಡಿ ೮೬೧ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಇಲ್ಲಿಯವರೆಗೆ ೩೯೭ ಮನೆಗಳು ಪೂರ್ಣಗೊಂಡಿವೆ ೨೩೩ ಮನೆಗಳು ಪ್ರಗತಿಯಲ್ಲಿದ್ದು ೨೨೦ ಮನೆಗಳು ಪ್ರಾರಂಭವಾಗಿ ಇರುವುದಿಲ್ಲ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಆಯ್ಕೆಯಾಗಿ ಮನೆ ಪ್ರಾರಂಭಿಸುವ ಫಲಾನುಭವಿಗಳು ಈ ಕೂಡಲೇ ಮನೆ ಪ್ರಾರಂಭಿಸಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ಜಿಪಿಎಸ್ ಮಾಡಲು ಎಲ್ಲರೂ ಕ್ರಮವಹಿಸುವುದು.ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಒಂದು ಕಂತಿನ ಎರಡು ಕಂತಿನ ಹಾಗೂ ೩ ಕಂತುಗಳು ಅನುದಾನ ಪಡೆದು ಪ್ರಗತಿಯಲ್ಲಿರುವ ಮನೆಗಳನ್ನು ಅತಿ ತುರ್ತಾಗಿ ಮನೆಗಳನ್ನು ಪೂರ್ಣಗೊಳಿಸಲು ಈ ಮೂಲಕ ತಿಳಿಸುತ್ತೇವೆ. ನಂತರ ವಸತಿ ಯೋಜನೆ ನೋಡಲ್ ಅಧಿಕಾರಿ ತಿಮ್ಮೇಶ್ ಮಾತನಾಡಿ ೨೦೧೦-೧೧ ನೇ ಸಾಲಿನಲ್ಲಿ ಸಾಮಾಜಿಕ-ಆರ್ಥಿಕ ಜನಗಣತಿ ಸಮೀಕ್ಷೆಯಲ್ಲಿ ಅರ್ಹ ವಸತಿರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಪ್ರಸ್ತುತ ಪಟ್ಟಿಯಲ್ಲಿರುವ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಿರುವುದರಿಂದ ೨೦೧೦-೧೧ರ ಸಾಮಾಜಿಕ ಸಮೀಕ್ಷೆಯಲ್ಲಿ ಹೊರಗುಳಿದ ಅರ್ಹ ವಸತಿ ಮತ್ತು ನಿವೇಶನರಹಿತರಿಗೆ ಸೌಲಭ್ಯವನ್ನು ಕಲ್ಪಿಸಲು ೨೦೧೭-೧೮ ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆ ಅಡಿ ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಂಡಿದ್ದು ನಮ್ಮ ತಾಲೂಕು ವ್ಯಾಪ್ತಿಯಡಿ ಉತ್ಸವದ ೧೦೧೫೯ ವಸತಿ ರೈತರನ್ನು ಮತ್ತು೧೮೯೫ ನಿವೇಶನ ರಹಿತರು ಸೇರಿ ಒಟ್ಟು ೧೨೦೫೪
ಫಲಾನುಭವಿಗಳನ್ನು ಗುರುತಿಸಲಾಗಿದ್ದು ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಧದ ವಸತಿ ನಿವೇಶನ ಯೋಜನೆಯಡಿ ಹಂತಹಂತವಾಗಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು.ಕೇಂದ್ರ ಸರ್ಕಾರವು ಈಗಾಗಲೇ ಸಮೀಕ್ಷೆಯಲ್ಲಿ ಹೆಸರನ್ನು ಸೇರಿಸುವ ಅವಕಾಶವನ್ನು ನಿಲ್ಲಿಸಲಾಗಿದ್ದು ಪ್ರಸ್ತುತ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ವಸತಿ ರಹಿತ ಮತ್ತು ನಿವೇಶನರಹಿತರ ಅಗತ್ಯ ದಾಖಲಾತಿಗಳನ್ನು ಆಧಾರ್ ಕಾರ್ಡ್ ಪಡಿತರಚೀಟಿ ವೋಟರ್ ಐಡಿ ಜಾತಿ/ಆದಾಯ ಪತ್ರಗಳು ಬ್ಯಾಂಕ್ ಪಾಸ್ ಬುಕ್ ಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು ಇನ್ನು ದಾಖಲೆಗಳನ್ನು ಸಲ್ಲಿಸದೆ ಫಲಾನುಭವಿಗಳು ಈ ಕೂಡಲೇ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಲು ಈ ಮೂಲಕ ತಿಳಿಸಲಾಗುತ್ತಿದೆ.ಸಮೀಕ್ಷೆ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಸಾಧ್ಯವಾಗದ ಫಲಾನುಭವಿಗಳು ಅರ್ಜಿಗಳನ್ನು ತಯಾರುಮಾಡಿ ಇಟ್ಟುಕೊಳ್ಳುವುದು ಸರ್ಕಾರವು ಹೆಸರು ನಮೂದಿಸಲು ಕಾಶ ನೀಡಿದಾಗ ಸಾಮಾಜಿಕ ಪ್ರಕಟಣೆ ಹೊರಡಿಸಿ ವಸತಿ ನಿವೇಶನ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದರು ಈ ಸಂದರ್ಭದಲ್ಲಿ ಶಿವಕುಮಾರ್. ಸಿಬ್ಬಂದಿಗಳಾದ ರೇವಣ್ಣ ನಾಯ್ಕ್. ವೆಂಕಟೇಶ್. ಅಶ್ವಥ್ ನಾರಾಯಣ. ಲಕ್ಷ್ಮಿಪತಿ. ಗಾಯತ್ರಿ ದೇವಿ ಸಿದ್ದಿಕ್. ಕಿರಣ್. ಪಿಡಿಓಗಳು ಮತ್ತು ಫಲಾನುಭವಿಗಳು ಹಾಜರಿದ್ದರು