
ಜೇವರ್ಗಿ,ಮಾ.19-ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯೊಬ್ಬರ ಕೊಲೆ ಮಾಡಿರುವ ಘಟನೆ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯ ಹರನಾಳ (ಬಿ) ಕ್ರಾಸ್ ಹತ್ತಿರ ಇಂದು ಬೆಳಗಿನಜಾವ ನಡೆದಿದೆ.
ಹರನಾಳ (ಬಿ) ಗ್ರಾಮದ ಅನುಸುಬಾಯಿ (34) ಕೊಲೆಯಾದವರು. 10-12 ವರ್ಷಗಳ ಹಿಂದೆ ಅನುಸುಬಾಯಿ ವಿಚ್ಛೇದನವಾಗಿತ್ತು. ಹರನಾಳ (ಬಿ) ಗ್ರಾಮದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಕೊಲೆಗೆ ನಿಖರವಾದ ಕಾರಣವೇನು ಎಂಬುವುದಿನ್ನೂ ತಿಳಿದುಬಂದಿಲ್ಲ.
ಸುದ್ದಿ ತಿಳಿದು ಎಸ್.ಪಿ.ಇಶಾ ಪಂತ್, ಜೇವರ್ಗಿ ಸಿಪಿಐ ಮತ್ತು ಯಡ್ರಾಮಿ ಪಿ.ಎಸ್.ಐ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.